HomeLatest NewsBREAKING : ಸಂಸದೆ ಸ್ವಾತಿ ಮಾಲಿವಾಲ್ ಬಿಜೆಪಿ ಸೇರ್ಪಡೆ ; ಕೇಜ್ರಿವಾಲ್ ವಿರುದ್ಧ 'ಗೂಂಡಾಗಿರಿ' ,...

BREAKING : ಸಂಸದೆ ಸ್ವಾತಿ ಮಾಲಿವಾಲ್ ಬಿಜೆಪಿ ಸೇರ್ಪಡೆ ; ಕೇಜ್ರಿವಾಲ್ ವಿರುದ್ಧ ‘ಗೂಂಡಾಗಿರಿ’ , ‘ಭ್ರಷ್ಟಾಚಾರ’ದ ಗಂಭೀರ ಆರೋಪ

ನವದೆಹಲಿ : ಅರವಿಂದ್ ಕೇಜ್ರಿವಾಲ್ ಅವರ ಗೂಂಡಾಗಿರಿ ಮತ್ತು ಭ್ರಷ್ಟಾಚಾರಕ್ಕೆ ಬೇಸತ್ತು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ರಾಜೀನಾಮೆ ನೀಡಿದ್ದಾರೆ. ಪಕ್ಷವು ಸಿದ್ಧಾಂತಗಳನ್ನು ಮರೆತು ಹೈಜಾಕ್ ಆಗಿದೆ ಎಂದು ಆರೋಪಿಸಿರುವ ಅವರು, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ದೆಹಲಿ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಸ್ವಾತಿ ಮಾಲಿವಾಲ್ ಅವರು ಆಪ್ ನಾಯಕತ್ವದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪಕ್ಷವು ಈಗ ಕೇವಲ ಸುಳ್ಳು ಮತ್ತು ಗೂಂಡಾಗಿರಿಯ ಅಖಾಡವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಪಕ್ಷವನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತಗಳು ಈಗ ಗಾಳಿಗೆ ತೂರಲ್ಪಟ್ಟಿವೆ ಎಂದು ಮಾಲಿವಾಲ್ ದೂರಿದ್ದಾರೆ.ನನ್ನ ಮೇಲೆ ನಡೆದ ಹಲ್ಲೆಯ ಘಟನೆಯ ನಂತರವೂ ಪಕ್ಷವನ್ನು ಸರಿಪಡಿಸಲು ನಾನು ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸಿದೆ. ಆದರೆ ಈಗ ಪರಿಸ್ಥಿತಿ ಮಿತಿ ಮೀರಿದೆ. ಇನ್ನು ಸಾಕು (Enough is Enough) ಎಂದು ನಿರ್ಧರಿಸಿ ಹೊರಬಂದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.ಕೇಜ್ರಿವಾಲ್ ಅವರ ಭ್ರಷ್ಟಾಚಾರ ಮತ್ತು ಅವರ ಬೆಂಬಲಿಗರ ಗೂಂಡಾಗಿರಿ ವರ್ತನೆಯಿಂದಾಗಿ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular