ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜಿಸಿದ ಘಟನೆ ಬಳಿಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆ ವ್ಯಕ್ತಿ ಪಾದ ತೊಳೆದಿದ್ದಾರೆ. ಬಳಿಕ ಅವರ ಬಳಿ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಬುಡಕಟ್ಟು ಜನಾಂಗದ ದಶ್ಮತ್ ರಾವತ್ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ವಿಪಕ್ಷಗಳು ಬಿಜೆಪಿ ದಲಿತ, ಬುಡಕಟ್ಟು ಜನ ವಿರೋಧಿ ಎನ್ನುವುದು ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದವು. ತೀವ್ರ ವಿರೋಧ, ಟೀಕೆಗಳ ಬಳಿಕ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೋಪಾಲ್‌ನಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಕಾರ್ಮಿಕನ ಕಾಲು ತೊಳೆದು ಕ್ಷಮೆಯಾಚಿಸಿದ್ದಾರೆ.
“ಆ ವೀಡಿಯೋ ನೋಡಿ ನನಗೆ ನೋವಾಯಿತು. ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಜನರು ನನಗೆ ದೇವರಿದ್ದಂತೆ” ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾರ್ಮಿಕರಾದ ದಶ್ಮತ್ ರಾವತ್‌ಗೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತ ದಶ್ಮತ್ ರಾವತ್ ಅವರೊಂದಿಗೆ ಭೋಪಾಲ್‌ನ ಸ್ಮಾರ್ಟ್ ಸಿಟಿ ಪಾರ್ಕ್‌ಗೆ ಭೇಟಿ ನೀಡಿ ಸಸಿಗಳನ್ನು ನೆಟ್ಟರು.
ಜನರ ಸೇವೆ ಮಾಡುವುದು ದೇವರನ್ನು ಪೂಜಿಸುವುದಕ್ಕೆ ಸಮಾನ. ಅಮಾನವೀಯ ಘಟನೆಯಿಂದ ತನಗೂ ನೋವಾಗಿದೆ. ನನಗೆ ಬಡವರು ದೇವರಂತೆ. ದೇವರು ಪ್ರತಿಯೊಬ್ಬ ಮನುಷ್ಯನಲ್ಲೂ ನೆಲೆಸಿದ್ದಾನೆ ಎಂದು ನಾವು ನಂಬುತ್ತೇವೆ. ದಶ್ಮತ್ ರಾವತ್ ಅವರೊಂದಿಗೆ ನಡೆದ ಅಮಾನವೀಯ ಘಟನೆಯಿಂದ ನನಗೆ ನೋವಾಗಿದೆ. ಬಡವರಿಗೆ ಗೌರವ ಮತ್ತು ಭದ್ರತೆ ಮುಖ್ಯ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
https://twitter.com/ANI/status/1676820004296327169?ref_src=twsrc%5Etfw%7Ctwcamp%5Etweetembed%7Ctwterm%5E1676820004296327169%7Ctwgr%5E2520d9cfaf2f0f52ab424c79a38bfd8442f8096e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Fmpcmshivrajchouhanwashesfeetoftriballabourerapologisesdaysaftermanurinatedonhim-newsid-n515873836