ಹೊಟ್ಟೆಯ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡಬಲ್ಲದು ಮೌತ್‌ವಾಶ್‌…!

ವಿಶ್ವದಾದ್ಯಂತ ಕ್ಯಾನ್ಸರ್‌ನಿಂದ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಹೊಟ್ಟೆಯ ಕ್ಯಾನ್ಸರ್‌ ಕೂಡ ಜನರನ್ನು ಬಲಿಪಡೆಯುತ್ತಿದೆ. ಹೊಟ್ಟೆಯ ಕ್ಯಾನ್ಸರ್‌ ಅನ್ನು ಬೇಗ ಪತ್ತೆ ಮಾಡುವುದು ಕಷ್ಟ. ಹಾಗಾಗಿ ಹೆಚ್ಹೆಚ್ಚು ಸಾವು ಸಂಭವಿಸುತ್ತದೆ. ಇತ್ತೀಚಿನ ಸಂಶೋಧನೆಯೊಂದರಲ್ಲಿ ವಿಜ್ಞಾನಿಗಳು ಸರಳವಾದ ಮೌತ್‌ ವಾಶ್‌ ಮೂಲಕ ಹೊಟ್ಟೆಯ ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿಯಬಹುದು ಎಂಬುದನ್ನು ಪತ್ತೆ ಮಾಡಿದ್ದಾರೆ.

ಈ ಅಧ್ಯಯನದಲ್ಲಿ ಸಂಶೋಧಕರು 98 ಜನರ ಬಾಯಿಯ ಬ್ಯಾಕ್ಟೀರಿಯಾದ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಈ ಪೈಕಿ 30 ಮಂದಿಗೆ ಹೊಟ್ಟೆಯ ಕ್ಯಾನ್ಸರ್, 30 ಮಂದಿ ಕ್ಯಾನ್ಸರ್ ಪೂರ್ವ ಹಂತದಲ್ಲಿದ್ದು, 38 ಮಂದಿ ಆರೋಗ್ಯವಾಗಿದ್ದಾರೆ.

ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರ ಬಾಯಿಯ ಬ್ಯಾಕ್ಟೀರಿಯಾ ಮತ್ತು ಆರೋಗ್ಯವಂತ ಜನರ ಬಾಯಿಯ ಬ್ಯಾಕ್ಟೀರಿಯಾಗಳಲ್ಲಿ ಕ್ಯಾನ್ಸರ್ ಪೂರ್ವದಲ್ಲಿ ಸ್ಪಷ್ಟ ವ್ಯತ್ಯಾಸವಿದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ. ಕ್ಯಾನ್ಸರ್ ಮತ್ತು ಕ್ಯಾನ್ಸರ್ ಪೂರ್ವ ಪ್ರಕರಣಗಳಲ್ಲಿಯೂ ಸಹ ಬಾಯಿಯ ಬ್ಯಾಕ್ಟೀರಿಯಾದಲ್ಲಿ ಬಹಳ ಕಡಿಮೆ ವ್ಯತ್ಯಾಸ ಕಂಡುಬಂದಿದೆ. ಹೊಟ್ಟೆಯಲ್ಲಿ ಬದಲಾವಣೆಗಳು ಪ್ರಾರಂಭವಾದ ತಕ್ಷಣ, ಬಾಯಿಯ ಬ್ಯಾಕ್ಟೀರಿಯಾದಲ್ಲಿ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ಇದು ಸೂಚಿಸುತ್ತದೆ.

ಬಾಯಿ ಮತ್ತು ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗಳು ಪರಸ್ಪರ ಸಂಬಂಧ ಹೊಂದಿವೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾದಿಂದ ನಾವು ಹೊಟ್ಟೆಯ ಪರಿಸರದ ಕಲ್ಪನೆಯನ್ನು ಪಡೆಯಬಹುದು. ಈ ಮೂಲಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು. ಇದು ಹೊಟ್ಟೆಯ ಕ್ಯಾನ್ಸರ್ ಅನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಈ ಸಂಶೋಧನೆಯು ಇನ್ನೂ ಆರಂಭಿಕ ಹಂತದಲ್ಲಿದೆ, ಆದರೆ ಇದು ಪ್ರಮುಖ ಆವಿಷ್ಕಾರ ಎಂದು ವೈದ್ಯರು ನಂಬುತ್ತಾರೆ. ಭವಿಷ್ಯದಲ್ಲಿ, ಹೊಟ್ಟೆಯ ಕ್ಯಾನ್ಸರ್ ಅನ್ನು ಕೇವಲ ಮೌತ್‌ವಾಶ್ ಮೂಲಕ  ಕಂಡುಹಿಡಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read