HomeLatest NewsBIG NEWS : 'ಮೌಂಟ್ ಎವರೆಸ್ಟ್' ಏರಿ ಇಳಿಯುವಾಗ ದುರಂತ : ಭಾರತೀಯ ಪರ್ವತಾರೋಹಿ...

BIG NEWS : ‘ಮೌಂಟ್ ಎವರೆಸ್ಟ್’ ಏರಿ ಇಳಿಯುವಾಗ ದುರಂತ : ಭಾರತೀಯ ಪರ್ವತಾರೋಹಿ ಸಾವು

ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ ಸಂಭಮಿಸಿದ್ದ ಭಾರತೀಯ ಸಾಹಸಿಯೊಬ್ಬರು ಎವರೆಸ್ಟ್ ಶಿಖರ ಇಳಿಯುವಾಗ ಸಾವನ್ನಪಿದ್ದಾರೆ.

ಔಂಟ್ ಎವರೆಸ್ಟ್ ನಲ್ಲಿ ಈ ವರ್ಷ ಸಂಭವಿಸಿದ ಎರಡನೇ ಸಾವು ಇದಾಗಿದೆ. ಪಶ್ಚಿಮ ಬಂಗಾಳ ಮೂಲದ 45 ವರ್ಷದ ಸಬರ್ತಾ ಘೋಷ್ ಮೃತರು. ಗುರುವಾರ ಸಬರ್ತಾ ಘೋಷ್ ಮೌಂಟ್ ಎವರೆಸ್ಟ್ ಹತ್ತಿ ಸಂಭ್ರಮಿಸಿದ್ದರು. ಶಿಖರದ ತುದಿ ತಲುಪಿ ಹಿಂತಿರುಗುವಾಗ ಕೇವಲ 50 ಮೀಟರ್ ಇಳಿದಿದ್ದರು. ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಬರ್ತಾ ಘೋಷ್ ಸಾಕಷ್ಟು ಬಳಲಿದ್ದರು. ಎತ್ತರದಲ್ಲಿ ಹಲವರನ್ನು ಕಾಡುವ ದೈಹಿಕ ಬಳಲಿಕೆಯಿಂದಲೂ ಸುಸ್ತಾಗಿರಬಹುದು. ಅವರ ಮಾರ್ಗದರ್ಶಕರು ಬರುವುದನ್ನು ಕಾಯುತ್ತಿದೇವೆ. ಅವರು ಬಂದ ಬಳಿಕ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಸ್ನೋವಿ ಹೊರೈಝಾನ್ ಟ್ರೆಕ್ಸ್ ನ ಬೋಧ ರಾಜ್ ಭಂಡಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಡಿಮೆ ಆಮ್ಲಜನಕ ಮತ್ತು ಎತ್ತರದ ಪ್ರದೇಶದಲ್ಲಿ ಉಂಟಾಗುವ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ಸಾವನ್ನಪ್ಪಿರಬಹುದು. ಎವರೆಸ್ಟ್ ನ 8 ಸಾವಿರ ಮೀಟರ್ ಎತ್ತರದ ಪ್ರದೇಶವನ್ನು ಡೆತ್ ಝೋನ್ ಎಂದೇ ಕರೆಯಲಾಗುತ್ತದೆ. ಘೋಷ್ ಇದ್ದ ತಂಡದಲ್ಲೇ ಇದ್ದ ಫಿಲಿಪಿನೊದ ಸಾಹಸಿ ಶಿಖರದ ತುದಿ ತಲುಪುವ ಮೊದಲೇ ಬುಧವಾರ ಮೃತಪಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular