HomeKarnatakaBREAKING: ಪತಿಯ ಅಕ್ರಮ ಸಂಬಂಧ: 7 ತಿಂಗಳ ಮಗುವಿನ ಮುಂದೆಯೇ ಮಹಿಳೆ ಆತ್ಮಹತ್ಯೆ

BREAKING: ಪತಿಯ ಅಕ್ರಮ ಸಂಬಂಧ: 7 ತಿಂಗಳ ಮಗುವಿನ ಮುಂದೆಯೇ ಮಹಿಳೆ ಆತ್ಮಹತ್ಯೆ

ಬೆಂಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಮಹಿಳೆ ತನ್ನ 7 ತಿಂಗಳ ಹಸುಗೂಸಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ರಾಯಸಂದ್ರ ಮನೆಯಲ್ಲಿ ನಡೆದಿದೆ.

ಸಾನಿಕಾ ಗೌಡ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಒಂದುವರೆ ವರ್ಷದ ಹಿಂದಷ್ಟೇ ಸಾನಿಕಾ ಹಾಗೂ ಶರಣ್ ಗೌಡ್ ವಿವಾಹವಾಗಿದ್ದರು. ಬಾಣಂತನಕ್ಕೆಂದು ಸಾನಿಕಾ ತವರಿಗೆ ಬಂದಿದ್ದಳು. ಈ ನಡಿವೆ ಪತಿ ಇನ್ನೋರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧದಲ್ಲಿರುವುದು ಪತ್ನಿಗೆ ಗೊತ್ತಾಗಿದೆ. ಇದರಿಂದ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.

ಸಾವಿಗೂ ಮುನ್ನ ಸಾನಿಕಾ ಪತಿ ಶರಣ್ ಗೆ ವಿಡಿಯೋ ಕಾಲ್ ಮಾಡಿದ್ದಳು. ಬಳಿಕ ಕೆಲ ಸಮಯದಲ್ಲೇ ತವರು ಮನೆಯಲ್ಲಿ ಕೋಣೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular