HomeLatest Newsನವಜಾತ ಶಿಶು ಬಿಟ್ಟು ಪರಾರಿಯಾದ ಬಾಣಂತಿಯರು: ರಾಜ್ಯದಲ್ಲಿ ಅಮಾನವೀಯ ಪ್ರಕರಣ

ನವಜಾತ ಶಿಶು ಬಿಟ್ಟು ಪರಾರಿಯಾದ ಬಾಣಂತಿಯರು: ರಾಜ್ಯದಲ್ಲಿ ಅಮಾನವೀಯ ಪ್ರಕರಣ

ಬೆಂಗಳೂರು: ನವಜಾತ ಶಿಶುಗಳನ್ನು ಬಿಟ್ಟು ಮಹಿಳೆಯರಿಬ್ಬರು ಪರಾರಿಯಾದ ಎರಡು ಘಟನೆ ರಾಜ್ಯದಲ್ಲಿ ನಡೆದಿವೆ.

ಬಾಗಲಕೋಟೆ:

ಹೆರಿಗೆಯ ನಂತರ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ಪರಾರಿಯಾದ ಘಟನೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದಿದೆ. ಹೆರಿಗೆಯಾದ ನಂತರ ಆಸ್ಪತ್ರೆ ಸಿಬ್ಬಂದಿ ಒಪಿಡಿ ಮಾಡಿಸಿ ತಾಯಿ ಕಾರ್ಡ್ ಕೊಡಿ ಎಂದು ಮಹಿಳೆ ಕೇಳಿದ್ದಾಳೆ. ನಂತರ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಾಣಂತಿ ನಾಪತ್ತೆಯಾಗಿದ್ದಾಳೆ ಮಹಿಳೆ ಆಸ್ಪತ್ರೆಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಒಂದು ದಿನ ಪೂರ್ತಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಮಗುವಿನ ಪೋಷಕರಿಗೆ ಕಾದರೂ ಯಾರೂ ಬಂದಿಲ್ಲ. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಾಪ್ಶನ್ ಸೆಂಟರ್ಗೆ ಮಗುವನ್ನು ಹಸ್ತಾಂತರ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮಗು ಆರೋಗ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಗಮಂಗಲ:

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಗೇಟ್ ಮುಂಭಾಗ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ತಾಯಿಯೊಬ್ಬಳು ಬಿಟ್ಟು ಹೋದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಆಸ್ಪತ್ರೆಯ ಗೇಟ್ ಮುಂಭಾಗ ಮರದ ಕೆಳಗೆ ಮಗು ಅಳುವುದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಗುವಿಗೆ ಆದಿಚುಂಚನಗಿರಿ ಆಸ್ಪತ್ರೆಯ ಮಕ್ಕಳ ಸುರಕ್ಷತಾ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಳ್ಳೂರು ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular