HomeKarnatakaSHOCKING NEWS: 3 ವರ್ಷದ ಮಗುವಿನ ಮುಂದೆ ನೇಣಿಗೆ ಶರಣಾದ ತಂದೆ-ತಾಯಿ!

SHOCKING NEWS: 3 ವರ್ಷದ ಮಗುವಿನ ಮುಂದೆ ನೇಣಿಗೆ ಶರಣಾದ ತಂದೆ-ತಾಯಿ!

ಹಾವೇರಿ: ಮೂರು ವರ್ಷದ ಮಗುವಿನ ಮುಂದೆಯೇ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬೆಳವಿಗಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಅಂಬೇಡ್ಕರ್ ನಗರದ ನಿವಾಸಿಗಳಾದ ಹನುಮಂತ ಹೊನ್ನಪ್ಪನವರ (32) ಹಾಗೂ ಸವಿತಾ ಹೊನ್ನಪ್ಪನವರ (26) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ.

ಮೂರು ವರ್ಷದ ಮಗಳು ಚೇತನಾ ಜೋರಾಗಿ ಅಳುತ್ತಿರುವುದನ್ನು ಕೇಳಿ ನೆರೆಹೊರೆಯವರು ಮನೆ ಬಳಿ ಬಂದಿದ್ದಾರೆ. ಕರೆದರೂ ಯಾರೂ ಮನೆ ಬಾಗಿಲು ತೆರೆಯುತ್ತಿರಲಿಲ್ಲ. ಮಗು ಅಳುತ್ತಲೇ ಇತ್ತು. ಇದರಿಂದ ಅನುಮಾನಗೊಂಡು ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನೋಡಿದ್ದಾರೆ. ಈ ವೇಳೆ ಮಗುವಿನ ಮುಂದೆಯೇ ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಮೇಲ್ಛಾವಣಿಯಿಂದ ಕೆಳಗೆ ಇಳಿದು ಮಗುವನ್ನು ಎತ್ತಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular