ಬೆಂಗಳೂರು : ಬಿಎಂಟಿಸಿ ಎಸಿ ಬಸ್ ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಹಿಳೆಯೊಬ್ಬರು ಈ ಬಗ್ಗೆ ಟ್ವೀಟ್ ಮಾಡಿ ಸಮಸ್ಯೆ ಹಂಚಿಕೊಂಡಿದ್ದಾರೆ. ಮಹಿಳೆ ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ.
ಬಿಎಂಟಿಸಿ ಬಸ್ ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಬಸ್ ಪ್ರಯಾಣ ಶೋಚನೀಯವಾಗಿದೆ. ಬಸ್ಸಿನಲ್ಲಿ ಸಾಕಷ್ಟು ಸೊಳ್ಳೆಗಳಿವೆ. ಬಿಎಂಟಿಸಿ ಎಸಿ ಬಸ್ ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣವನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದೆಯೇ? ಎಂದು ಮಹಿಳೆ ಟ್ವೀಟ್ ಮಾಡಿದ್ದಾರೆ.
ಮಳೆಗಾಲದ ವೇಳೆ ಎಲ್ಲಾ ಕಡೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ರಕ್ತ ಹೀರುವ ಸೊಳ್ಳೆಗಳು ಬಿಎಂಟಿಸಿ ಬಸ್ ಗೂ ಕಾಲಿಟ್ಟಿದ್ದು, ಸೊಳ್ಳೆಯಿಂದ ಮುಕ್ತಿ ಕೊಡಿ ಎಂದು ಟ್ವೀಟ್ ಮೂಲಕ ಬಿಎಂಟಿಸಿಯನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ, ಮಹಿಳೆಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://twitter.com/social__cop/status/1677169808532717568?ref_src=twsrc%5Etfw%7Ctwcamp%5Etweetembed%7Ctwterm%5E1677169808532717568%7Ctwgr%5E394cfe5907414be92e35e168f6a8ae693bd1d7a5%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fbengaluru%2Fmosquitoes-in-bmtc-ac-bus-tweet-gone-viral-vkb-625892.html