BIG NEWS: ಮತ್ತಷ್ಟು ದುಬಾರಿಯಾಗಿದೆ ಹಳದಿ ಲೋಹ; ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ…..!

ಮದುವೆ ಸೀಸನ್‌ ಶುರುವಾದ ಬೆನ್ನಲ್ಲೇ ಚಿನ್ನದ ದರ ಗಗನಕ್ಕೇರಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 62, 883 ರೂಪಾಯಿ ಆಗಿದೆ. ಇದು ಈವರೆಗಿನ ಗರಿಷ್ಠ ಮಟ್ಟ. ಫ್ಯೂಚರ್‌ ಮಾರ್ಕೆಟ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 62,722 ರೂಪಾಯಿಯಷ್ಟಿತ್ತು.

ವಹಿವಾಟು ಪ್ರಾರಂಭವಾಗುತ್ತಿದ್ದಂತೆ ಎಂಸಿಎಕ್ಸ್‌ನಲ್ಲಿ ಚಿನ್ನದ ದರ 10 ಗ್ರಾಂಗೆ 62,800 ರೂಪಾಯಿ ಮಟ್ಟವನ್ನು ದಾಟಿತು. MCX ನಲ್ಲಿ ಚಿನ್ನದ ಫೆಬ್ರವರಿ ಫ್ಯೂಚರ್‌ ಕೂಡ 10 ಗ್ರಾಂಗೆ 62,833 ರೂಪಾಯಿಯ ಅತ್ಯಧಿಕ ಮಟ್ಟ ತಲುಪಿದೆ. ಮದುವೆ ಸೀಸನ್ ಆಗಿರುವುದರಿಂದ ಚಿನ್ನದ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದೇ ಈ ಏರಿಕೆಗೆ ಕಾರಣ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರ ಏರುಗತಿಯಲ್ಲಿದೆ. COMEX ನಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 2044.30 ಡಾಲರ್‌ನಷ್ಟಾಗಿದೆ. ಶೇ.021ರಷ್ಟು ಬೆಲೆ ಹೆಚ್ಚಳವಾಗಿದೆ.

MCX ನಲ್ಲಿ ಬೆಳ್ಳಿಯ ಬೆಲೆ 164 ರೂಪಾಯಿ ಏರಿಕೆಯೊಂದಿಗೆ ಪ್ರತಿ ಕೆಜಿಗೆ 77,157 ರೂಪಾಯಿ ಆಗಿದೆ. ಬೆಳ್ಳಿ ವಹಿವಾಟು ಕೂಡ ಏರುಗತಿಯಲ್ಲಿದೆ. ಮದುವೆ ಸೀಸನ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡನ್ನೂ ವ್ಯಾಪಕವಾಗಿ ಖರೀದಿಸಲಾಗುತ್ತದೆ, ಈ ಕಾರಣದಿಂದ ಬೆಳ್ಳಿ ಕೂಡ ದುಬಾರಿಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಡಿಸೆಂಬರ್ ಫ್ಯೂಚರ್ಸ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 62,385 ರೂಪಾಯಿಗೆ ಮುಕ್ತಾಯಗೊಂಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read