ಬೆಂಗಳೂರು: ಹಿರಿಯ ಮಹಿಳಾ ಕ್ರಿಕೆಟಿಗರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಮಾಸಿಕ ಪಿಂಚಣಿ ಘೋಷಿಸಿದೆ.
ಹಿರಿಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಮಾಜಿ ಮಹಿಳಾ ಕ್ರಿಕೆಟಿಗರಿಗೆ ಮಾಸಿಕ ಪಿಂಚಣಿ ನೀಡಲು ಕೆ.ಎಸ್.ಸಿ.ಎ. ನಿರ್ಧರಿಸಿದೆ. 55 ವರ್ಷ ತುಂಬಿದ ಆಟಗಾರ್ತಿಯರಿಗೆ ಪಿಂಚಣಿ ನೀಡಲಾಗುವುದು. ಆದರೆ, ಮಹಿಳಾ ಕ್ರಿಕೆಟಿಗರು ಇದೇ ರೀತಿಯ ಪ್ರಯೋಜನ ಪಡೆಯುತ್ತಿರಬಾರದು. ಮಾಜಿ ಮಹಿಳಾ ಕ್ರಿಕೆಟಿಗರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಗುರುತಿಸುವ ಮತ್ತು ಗೌರವಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.

