HomeKarnatakaBREAKING : ಆ. 13ರಿಂದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭ ; ರಾಜ್ಯಪಾಲ 'ಥಾವರ್‌ಚಂದ್...

BREAKING : ಆ. 13ರಿಂದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭ ; ರಾಜ್ಯಪಾಲ ‘ಥಾವರ್‌ಚಂದ್ ಗೆಹ್ಲೋಟ್’ ಆದೇಶ

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. 2026ರ ಆಗಸ್ಟ್‌ 13ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ವಿಧಾನಸಭೆ ಅಧಿವೇಶನವನ್ನು ಕರೆಯಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಆದೇಶ ಹೊರಡಿಸಿದ್ದಾರೆ.

ಹೌದು. ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್‌ ಕಲಾಪಗಳು ಆಗಸ್ಟ್‌ 13ರಿಂದ ಆರಂಭವಾಗಲಿವೆ. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿವೇಶನ ಕರೆಯುವ ಆದೇಶ ಹೊರಡಿಸಿದ್ದಾರೆ. ಮುಂಗಾರು ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳು, ಮಳೆ ಹಾನಿ, ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಹಲವು ವಿಷಯಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ.

ಭಾರತ ಸಂವಿಧಾನದ 174ನೇ ಅನುಚ್ಛೇದದ (1)ನೇ ಖಂಡದಡಿ ರಾಜ್ಯಪಾಲರಿಗೆ ನೀಡಿರುವ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.ಮುಂಗಾರು ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳು, ಅಭಿವೃದ್ಧಿ ವಿಚಾರಗಳು, ಮಳೆ ಹಾನಿ, ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಸರ್ಕಾರದ ಯೋಜನೆಗಳು ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸುವ ನಿರೀಕ್ಷೆಯಿದೆ.ರಾಜ್ಯಪಾಲರ ಆದೇಶದಂತೆ ಅಧಿಸೂಚನೆಯನ್ನು 2026ರ ಜುಲೈ 28ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ವಿಧಾನ ಪರಿಷತ್ತಿನ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ

ದಿನಾಂಕವಾರಕಾರ್ಯಕಲಾಪಗಳು
13.08.2026ಗುರುವಾರಸರ್ಕಾರಿ ಕಾರ್ಯಕಲಾಪಗಳು
14.08.2026ಶುಕ್ರವಾರಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
15.08.2026ಶನಿವಾರಸಾರ್ವತ್ರಿಕ ರಜಾ ದಿನ
16.08.2026ಭಾನುವಾರಸಾರ್ವತ್ರಿಕ ರಜಾ ದಿನ
17.08.2026ಸೋಮವಾರಸರ್ಕಾರಿ ಕಾರ್ಯಕಲಾಪಗಳು
18.08.2026ಮಂಗಳವಾರಸರ್ಕಾರಿ ಕಾರ್ಯಕಲಾಪಗಳು
19.08.2026ಬುಧವಾರಸರ್ಕಾರಿ ಕಾರ್ಯಕಲಾಪಗಳು
20.08.2026ಗುರುವಾರಸರ್ಕಾರಿ ಕಾರ್ಯಕಲಾಪಗಳು
21.08.2026ಶುಕ್ರವಾರಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
22.08.2026ಶನಿವಾರಸಾರ್ವತ್ರಿಕ ರಜಾ ದಿನ
23.08.2026ಭಾನುವಾರಸಾರ್ವತ್ರಿಕ ರಜಾ ದಿನ
24.08.2026ಸೋಮವಾರಸರ್ಕಾರಿ ಕಾರ್ಯಕಲಾಪಗಳು
25.08.2026ಮಂಗಳವಾರಸರ್ಕಾರಿ ಕಾರ್ಯಕಲಾಪಗಳು
26.08.2026ಬುಧವಾರಸಾರ್ವತ್ರಿಕ ರಜಾ ದಿನ
27.08.2026ಗುರುವಾರಸರ್ಕಾರಿ ಕಾರ್ಯಕಲಾಪಗಳು

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular