HomeIndiaಬಿತ್ತನೆಗೆ ರೆಡಿಯಾಗಿ ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ಜುಲೈ 6 ರವರೆಗೂ ಮಳೆ ದುರ್ಬಲ

ಬಿತ್ತನೆಗೆ ರೆಡಿಯಾಗಿ ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ಜುಲೈ 6 ರವರೆಗೂ ಮಳೆ ದುರ್ಬಲ

ನವದೆಹಲಿ: ಈ ಬಾರಿ ತಡವಾಗಿ ಪ್ರವೇಶಿಸಿದ ಮುಂಗಾರು ಮಾರುತಗಳು ಜುಲೈ 6 ರವರೆಗೆ ದುರ್ಬಲವಾಗಿರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ವೆದರ್ ಮುನ್ಸೂಚನೆ ನೀಡಿವೆ.

ಜುಲೈ 6ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗುತ್ತದೆ. ನಂತರ ಮುಂಗಾರು ಚುರುಕಾಗುತ್ತದೆ ಎಂದು ಹೇಳಲಾಗಿದೆ. ಜುಲೈ 6 ರವರೆಗೆ ಮಧ್ಯ ಭಾರತ, ವಾಯುವ್ಯ ಭಾರತದ ಬಹುತೇಕ ಭಾಗಗಳು ತೀವ್ರ ಶುಷ್ಕ ಪ್ರದೇಶವಾಗಿರುತ್ತವೆ ಎಂದು ಸ್ಕೈ ಮೇಟ್ ಸಂಸ್ಥೆ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿತ್ತನೆಯ ಸಮಯ ಇದಾಗಿದ್ದು, ರೈತರಿಗೆ ಮಳೆ ಅಗತ್ಯವಾಗಿದೆ. ಆದರೆ, ಮಳೆಯಾಗದ ಕಾರಣ ರೈತರಿಗೆ ಸಂಕಷ್ಟ ಎದುರಾಗಿದೆ. ಜೂನ್ 1 ರಿಂದ ಶೇಕಡ 54 ರಷ್ಟು ಮಳೆ ಕೊರತೆಯನ್ನು ಭಾರತ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಶೇಕಡ 53 ರಷ್ಟು, ಮಧ್ಯ ಭಾರತದಲ್ಲಿ ಶೇಕಡ 80 ರಷ್ಟು, ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ ಶೇಕಡ 53 ರಷ್ಟು, ವಾಯುವ್ಯ ಭಾರತದಲ್ಲಿ ಶೇಕಡ 10ರಷ್ಟು ಮಳೆ ಕೊರತೆ ಆಗಿದೆ. ಜುಲೈ 6ರವರೆಗೂ ದುರ್ಬಲವಾಗಿರುವ ಮುಂಗಾರು ಮಾರುತಗಳು ನಂತರ ಚುರುಕಾಗುತ್ತವೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular