ಬಳ್ಳಾರಿ: ಹಣ ಡಬ್ಲಿಂಗ್ ಮಾಡುವುದಾಗಿ ಹೇಳಿ ಅಮಾಯಕ ಜನರಿಗೆ ಮೋಸ ಮಾಡಿದ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. 50 ಕೋಟಿ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿ ಪರಾರಿಯಾಗಿದ್ದಾಅನೆ.
ವಿಶ್ವನಾಥ್ ಹಣ ಪಡೆದು ವಂಚಿಸಿರುವ ಆರೋಪಿ. ಈತ ಮೊದಲು ಕಿರಾಣಿ ಅಂಗಡಿ ಇಟ್ಟಿದ್ದ. 5 ಸಾವಿರ ರೂಪಾಯಿಯ ಕಿರಾಣಿ ಸಾಮಾನುಗಳನ್ನು ಖರೀದಿಸಿದರೆ 2 ಸಾವಿರ ರೂ.ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಹೇಳಿದ್ದ. ಅಲ್ಲದೇ 15 ಸಾವಿರ ರೂಪಾಯಿ ಕೊಟ್ಟರಲೆ ತಿಂಗಳಲ್ಲಿ 20 ಸಾವುರ ಮಾಡಿಕೊಡುವುದಾಗಿ ಹಾಗೂ ಲಕ್ಷ ಹಣ ಕೊಟ್ಟರೆ ೪% ಬಡ್ಡಿ ಕೊಡುವುದಾಗಿ ಹೇಳಿದ್ದ.
ಅಷ್ಟೇ ಅಲ್ಲ ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಡುವುದಾಗಿ ಹೇಳಿದ್ದ. ಅದರಂತೆ ಕಿರಾಣಿಯನ್ನು ಒಂದು ತಿಂಗಳು ಫ್ರೀಯಾಗಿ ನೀಡಿದ್ದನಂತೆ. ಹೀಗೆ ಜನರ ನಂಬಿಕೆ ಗಿಟ್ಟಿಸಿಕೊಂಡ ಆಸಾಮಿ ದಿನದಿಂದ ದಿನಕ್ಕೆ ಮೋಸ ಅಮಡಲಾರಂಭಿಸಿದ್ದ. ಕಿರಾಣಿ ಅಂಗಡಿ ಮಾಲೀಕ ವಿಶ್ವನಾಥ್ ನನ್ನು ನಂಬಿ ಜನರು ಒಬ್ಬೊಬ್ಬರು ಲಕ್ಷ ಲಕ್ಷ ಹಣ ನೀಡಿದ್ದಾರೆ. ಹೀಗೆ ಜನರಿಂದ ಸುಮಾರು ೫೦ ಕೋಟಿ ಹಣ ಪಡೆದು ಎಸ್ಕೇಪ್ ಆಗಿದ್ದಾನೆ.
ಹಣ ವಾಪಾಸ್ ಕೊಡದೇ ಬಡ್ಡಿಯನ್ನೂ ನೀಡದೇ ಸತಾಯಿಸುತ್ತಿದ್ದ ವಿಶ್ವನಾಥ್ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ವಿಶ್ವನಾಥ್, ಕಿರಾಣಿ ಅಂಗಡಿ ಹಾಗೂ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.