ವೇತನ ಹೆಚ್ಚಳ ಬಗ್ಗೆ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: 8ನೇ ವೇತನ ಆಯೋಗ ರಚನೆಗೆ ಕೇಂದ್ರ ನಿರಾಕರಣೆ, ಕಾರ್ಯಕ್ಷಮತೆ ಆಧರಿಸಿ ಸ್ಯಾಲರಿ

ನವದೆಹಲಿ: ಕೇಂದ್ರ ಸರ್ಕಾರ ಮತ್ತೊಮ್ಮೆ ತುಟ್ಟಿಭತ್ಯೆ(ಡಿಎ) ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಲಕ್ಷಗಟ್ಟಲೆ ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ.

ಸದ್ಯ ನೌಕರರು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಾರೆ. 8ನೇ ವೇತನ ಆಯೋಗ ರಚನೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಹೇಳಿದೆ.

8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ 2014ರಲ್ಲಿ 7ನೇ ವೇತನ ಆಯೋಗವನ್ನು ಹೊರಡಿಸಿದ್ದು, ಪ್ರಸ್ತುತ ನೌಕರರು ಅದರ ಪ್ರಕಾರ ವೇತನ ಪಡೆಯುತ್ತಿದ್ದಾರೆ. ಇದರೊಂದಿಗೆ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಪ್ರಸ್ತುತ 8ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಸರ್ಕಾರದ ಬಳಿ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ವೇತನ ಆಯೋಗವನ್ನು 10 ವರ್ಷಗಳಿಗೊಮ್ಮೆ ತರಲಾಗುತ್ತದೆ. 10 ವರ್ಷಗಳ ಮೊದಲು ಅದನ್ನು ಯಾವುದೇ ರೀತಿಯಲ್ಲಿ ಪರಿಗಣಿಸುವ ಯೋಜನೆ ಇಲ್ಲ. ಪ್ರಸ್ತುತ, ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯನ್ನು ತರಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯಲ್ಲಿ, ಉದ್ಯೋಗಿಗಳು ಅವರ ಕೆಲಸಕ್ಕೆ ಅನುಗುಣವಾಗಿ ರೇಟಿಂಗ್ ಪಡೆಯುತ್ತಾರೆ. ಅದರ ಆಧಾರದ ಮೇಲೆ ಸಂಬಳವನ್ನು ಹೆಚ್ಚಿಸಲಾಗುತ್ತದೆ. ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ವೇತನ, ಭತ್ಯೆ ಮತ್ತು ಪಿಂಚಣಿ ರಚನೆಯನ್ನು ಬದಲಾಯಿಸಲು ಹೊಸ ಆಯೋಗವನ್ನು ಸ್ಥಾಪಿಸುವ ಅಗತ್ಯವಿಲ್ಲ. ಎಲ್ಲಾ ಭತ್ಯೆಗಳು ಮತ್ತು ವೇತನಗಳನ್ನು ಐಕ್ರಾಯ್ಡ್ ಸೂತ್ರದ ಆಧಾರದ ಮೇಲೆ ಪರಿಶೀಲಿಸಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read