ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ನಮ್ಮ ಮೆಟ್ರೋದ ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಮೋದಿ ಎಲೆಕ್ಟ್ರಾನಿಕ್ ಸಿಟಿ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಕ್ಕ ಕೂತು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಮೋದಿ ಅವರ ಪಕ್ಕದಲ್ಲಿ ಕುಳಿತಿದ್ದ ಸಿಎಂ ಸಿದ್ಧರಾಮಯ್ಯ ಭಾಷಣಕ್ಕೆ ಎದ್ದು ಹೋದ ಕೂಡಲೇ ಮೋದಿ ಪಕ್ಕದಲ್ಲಿ ಬಂದು ಕುಳಿತ ಡಿಸಿಎಂ ಡಿಕೆ ಪ್ರಧಾನಿಯವ ಕಿವಿಯಲ್ಲಿ ಮಾತನಾಡಿದ್ದಾರೆ. ಫೈಲ್ ಒಂದನ್ನು ತೋರಿಸಿ ಏನೋ ಹೇಳಿದ್ದು, ಇದಕ್ಕೆ ಮೋದಿ ತಲೆಯಾಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಎದ್ದು ಹೋದ ಬೆನ್ನಲ್ಲೇ ಮೋದಿಗೆ ಬಳಿಗೆ ಬಂದ ಡಿ.ಕೆ. ಶಿವಕುಮಾರ್ ಫೈಲ್ ತೋರಿಸಿ ಮೋದಿ ಜೊತೆಗೆ ಚರ್ಚೆ ನಡೆಸಿದ್ದಾರೆ. ಅವರ ಮಾತಿಗೆ ಮೋದಿ ತಲೆಯಾಡಿಸಿದ್ದಾರೆ.