ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ವಿವಾದಾತ್ಮಕ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕಿ ವಿಡಿಯೋ ಮೂಲಕ ಇಡೀ ದೇಶದ ಬಳಿ ಕ್ಷಮೆಯಾಚಿಸಿದ್ದಾಳೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೈ ಮುಗಿದು ಕುಳಿತುಕೊಂಡು ಮಾತನಾಡಿರುವ ಬಾಲಕಿ ಪ್ರತಿಭಟನೆ ವೇಳೆ ತನ್ನ ಸುತ್ತ ಮುತ್ತಲಿನ ಜನರ ಪ್ರಭಾವಕ್ಕೆ ಒಳಗಾಗಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾಗಿ ತಿಳಿಸಿದ ಬಾಲಕಿ ಜೀವನದಲ್ಲಿ ತಾನು ಮಾಡಿದ ಮೊದಲ ತಪ್ಪು ಇದೇ ಹಾಗೂ ಕೊನೆಯ ತಪ್ಪು ಇದೇ ಎಂದು ಹೇಳಿಕೆ ನೀಡಿದ್ದಾಳೆ.
ಅತ್ತ ಇದೇ ವಿಷಯವಾಗಿ ಮಾತನಾಡಿ ದಾರಿ ತಪ್ಪಿದ ಮಕ್ಕಳನ್ನು ಶಿಕ್ಷಿಸುವುದಕ್ಕಿಂತ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದಿರುವ ನರೇಂದ್ರ ಮೋದಿ ತನ್ನ ಅನುಯಾಯಿಗಳಿಗೆ ತನ್ನನ್ನು ನಿಂದಿಸುವವರಿಗೆ ಸರಿಯಾದ ಮಾರ್ಗದರ್ಶನ ನೀಡಿ ತಿದ್ದಿ ಎಂದು ಕರೆ ನೀಡಿದ್ದಾರೆ.
ಹೀಗೆ ತಾನು ಮಾಡಿದ ತಪ್ಪಿಗೆ ಬಾಲಕಿ ಕ್ಷಮೆಯಾಚಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಬಾಲಕಿ ಕ್ಷಮೆಯಾಚಿಸುವ ಮುನ್ನ ಆಕೆಗೆ ಇದೇ ಮೋದಿಯ ಕೆಲ ಅಭಿಮಾನಿಗಳು ಮನ ಬಂದಂತೆ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಸ್ಯಾಫ್ರನ್ ಕಿಂಗ್ ಎಂಬ ಮೋದಿ ಅಭಿಮಾನಿಯ ಎಕ್ಸ್ ಖಾತೆಯಲ್ಲಿ ಈ ಬಾಲಕಿಯ ಫೋಟೊವನ್ನು ಹಂಚಿಕೊಂಡು ವೇಶ್ಯೆ ಎಂದು ನಿಂದಿಸಲಾಗಿದೆ.
ಸದ್ಯ ಈ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಮೋದಿ ವಿರುದ್ಧ ಅರಿವಿಲ್ಲದೇ ಅವಾಚ್ಯ ಶಬ್ದ ಬಳಿಸಿದ್ದಕ್ಕೆ ಆ ಬಾಲಕಿಯೇನೋ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾಳೆ. ಹಾಗೆಯೇ ಆಕೆಯನ್ನು ವೇಶ್ಯೆ ಎಂದವರು ಹಾಗೂ ಇನ್ನೂ ಅನೇಕ ಕೆಟ್ಟ ಪದಗಳಿಂದ ನಿಂದಿಸಿದವರು ಕ್ಷಮೆ ಕೇಳುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
https://x.com/SaffronKingg_/status/2083417030158602504?s=20

