HomeKarnatakaಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದ ಬಾಲಕ

ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದ ಬಾಲಕ

ಮಂಗಳೂರು: ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಬಾಲಕ ಸಿಕ್ಕಿಬಿದ್ದ ಘಟನೆ ಬಾವುಟ ಗುಡ್ಡೆಯ ಖಾಸಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಹಲ್ಲಿನ ಚಿಕಿತ್ಸೆಗೆ ಬಂದಿದ್ದ ಬಾಲಕ ಇಂತಹ ಕೃತ್ಯವೆಸಗಿದ್ದಾನೆ. ಈ ಹಿಂದೆಯೂ ತಾಯಿಯೊಂದಿಗೆ ಚಿಕಿತ್ಸೆಗಾಗಿ ಬಂದಿದ್ದ ಬಾಲಕ ಮಂಗಳವಾರ ಒಬ್ಬನೇ ಬಂದಿದ್ದ. ಚಿಕಿತ್ಸೆಗೆ ಹೋಗುವ ಮೊದಲು ಮೊಬೈಲ್ ಅನ್ನು ಮಹಿಳೆಯರ ಶೌಚಾಲಯ ಗೃಹದ ಮೇಲೆ ಇಟ್ಟು ಹೋಗಿದ್ದಾನೆ. ಸೈಲೆಂಟ್ ಮೋಡ್ ನಲ್ಲಿ ಮೊಬೈಲ್ ಇಡುವುದನ್ನು ಮರೆತಿದ್ದಾನೆ. ನಂತರದಲ್ಲಿ ಮೊಬೈಲ್ ರಿಂಗಣಿಸಿದ್ದು ಪದೇ ಪದೇ ಮೊಬೈಲ್ ಶೌಚಾಗ್ರಹದ ಒಳಗೆ ನಿಂದ ರಿಂಗ್ ಆಗುತ್ತಿರುವುದನ್ನು ಗಮನಿಸಿದ ಸೆಕ್ಯೂರಿಟಿ ಒಳಗೆ ಹೋಗಿ ನೋಡಿದಾಗ ಮೇಲೆ ಮೊಬೈಲ್ ಫೋನ್ ಇಟ್ಟಿರುವುದು ಗೊತ್ತಾಗಿದೆ.

ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬಾಲಕನ ಸುಳಿವು ದೊರೆತಿದ್ದು, ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಬಾಲಕ ಸುರತ್ಕಲ್ ನಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಆರೋಪಿಯನ್ನು ಬಾಲಾಪರಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular