HomeKarnatakaBIG NEWS: ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿ ಷಡ್ಯಂತ್ರವಿದೆ; ಶಾಸಕ ರವಿ ಗಣಿಗ ಆರೋಪ

BIG NEWS: ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿ ಷಡ್ಯಂತ್ರವಿದೆ; ಶಾಸಕ ರವಿ ಗಣಿಗ ಆರೋಪ

ಶಿವಮೊಗ್ಗ: ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವಿ ಗಣಿಗ, ಈ ಹಿಂದೆ ಜನಾರ್ಧನ ರೆಡ್ಡಿಯನ್ನು ನಿಯಂತ್ರಿಸಿ ಹುನ್ನಾರ ಮಾಡಿದ್ರು. ಹಾಗೇ ಈಗ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕಂಟ್ರೋಲ್ ಮಾಡಲು ಜೊತೆಯಲ್ಲಿಯೇ ಇದ್ದು ಷಂಡ್ಯಂತ್ರ ಮಾಡಿದ್ದಾರೆ ಎಂದರು.

ಸಣ್ಣಪುಟ್ಟ ಪಕ್ಷ ಮುಗಿಸಲು ಬಿಜೆಪಿ ಹೊರಟಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಕಾರ್ಯಕರ್ತರೇ ಇಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷದ ಕಾರ್ಯಕರ್ತರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. ಈಗ ರೇವಣ್ಣ ಬಂಧನದ ಹಿಂದೆಯೂ ಬಿಜೆಪಿ ಷಡ್ಯಂತ್ರವಿದ್ದು, ಒಂದೇ ಕಲ್ಲಿನಲ್ಲಿ ಎರಡು ಪಕ್ಷಿ ಹೊಡೆಯುವ ತಂತ್ರ ಬಿಜೆಪಿಯದ್ದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular