HomeBeautyಮೆಹಂದಿ ಬೇಗನೆ ಕೆಂಪಾಗಲು ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮೆಹಂದಿ ಬೇಗನೆ ಕೆಂಪಾಗಲು ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮನೆಯಲ್ಲಿ ಶುಭ ಸಮಾರಂಭಗಳು ಇದ್ದಾಗ ಕೈಗೆ ಮೆಹಂದಿ ಹಾಕಿಕೊಳ್ಳುತ್ತೇವೆ, ಮೆಹಂದಿ ಕೆಂಪಾಗಿ ಬಂದರೆ ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಕೈಗೆ ಹಚ್ಚಿದ ಮೆಹಂದಿ ಕೆಂಪಾಗುವುದಿಲ್ಲ. ಅಂತವರು ಮೆಹಂದಿ ತ್ವರಿತವಾಗಿ ಕೆಂಪಾಗಲು ಇವುಗಳನ್ನು ಹಚ್ಚಿ.

*ಅಡುಗೆ ಸೋಡಾ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಇದನ್ನು ಕೈಗಳಿಗೆ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಮೆಹಂದಿ ಕೆಂಪಾಗುತ್ತದೆ.

*ಸ್ವಲ್ಪ ಉಪ್ಪು ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಚರ್ಮದ ಮೇಲೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಹಾಗೆ ಇಟ್ಟು ಬಳಿಕ ವಾಶ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ನಿಮ್ಮ ಕೈಗಳನ್ನು ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ಇದನ್ನು 2 ಬಾರಿ ಮಾಡಿದರೆ ಮೆಹಂದಿ ಕೆಂಪಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular