ತಿರುಗಾಟಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್​ ಹೊಟ್ಟೆಯೊಳಗೆ ಪತ್ತೆ……!

ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 ವರ್ಷದ ಡಿಯಾಗೋ ಬರ್ರಿಯಾ ಎಂಬ ವ್ಯಕ್ತಿ ನಾಪತ್ತೆಯಾಗಿದ್ದನು.

ಫೆಬ್ರವರಿ 20 ರಂದು, ರೋಕಾಸ್ ಕೊಲೊರಾಡಾಸ್ ಬಳಿಯ ಕಡಲತೀರದಲ್ಲಿ ಶೋಧ ತಂಡವು ಅವರ ವಾಹನವನ್ನು ಪತ್ತೆ ಮಾಡಿತ್ತು. ಹುಡುಕಾಟ ತಂಡವು ಬಾರ್ರಿಯಾ ಅವರ ಹೆಲ್ಮೆಟ್ ಅನ್ನು ಸಹ ಪತ್ತೆ ಮಾಡಿತ್ತು.

ಈಗ ಇಬ್ಬರು ಮೀನುಗಾರರು ಶಾರ್ಕ್‌ಗಳನ್ನು ಹಿಡಿದಿದ್ದಾರೆ. ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವಶೇಷಗಳು ಸಿಕ್ಕಿವೆ. ಕೂಡಲೇ ಅವರು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ, ಇದು ಡಿಯಾಗೋ ಬರ್ರಿಯಾ ಅವರ ದೇಹ ಎಂದು ತಿಳಿದಿದೆ.

ವಿಶಿಷ್ಟ ಉಪಕರಣಗಳನ್ನು ಬಳಸಿ ಇದು ಅವರದ್ದೇ ದೇಹ ಎಂದು ಪತ್ತೆ ಮಾಡಲಾಗಿದೆ. ಈತ ದೇಹದ ಮೇಲೆ ಹಾಕಿಸಿಕೊಂಡಿದ್ದ ಟ್ಯಾಟೂದಿಂದ ಇದು ಈತನೇ ಎನ್ನುವುದನ್ನು ಗುರುತು ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read