HomeEntertainmentಮಿಸ್ ಯುನಿವರ್ಸ್ ವೇದಿಕೆಯಿಂದ ಬಿದ್ದು ಗಾಯಗೊಂಡಿದ್ದ ಮಾಡೆಲ್: ಆಯೋಜಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜಮೈಕಾ ಸುಂದರಿ!

ಮಿಸ್ ಯುನಿವರ್ಸ್ ವೇದಿಕೆಯಿಂದ ಬಿದ್ದು ಗಾಯಗೊಂಡಿದ್ದ ಮಾಡೆಲ್: ಆಯೋಜಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜಮೈಕಾ ಸುಂದರಿ!

ಬ್ಯಾಂಕಾಕ್‌ನಲ್ಲಿ ನಡೆದ 74ನೇ ಮಿಸ್ ಯುನಿವರ್ಸ್ ಸ್ಪರ್ಧೆಯ ವೇಳೆ ರ‍್ಯಾಂಪ್‌ವಾಕ್ ಮಾಡುತ್ತಿದ್ದಾಗ ವೇದಿಕೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಿಸ್ ಯುನಿವರ್ಸ್ ಜಮೈಕಾ ಗೇಬ್ರಿಯೆಲ್ ಹೆನ್ರಿ, ಇದೀಗ ಮಿಸ್ ಯುನಿವರ್ಸ್ ಸಂಸ್ಥೆಯ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಘಟನೆ ನಡೆದು ವರ್ಷ ಕಳೆಯುತ್ತಿದ್ದಂತೆ, ಅವರು ಡೆಲಾವೇರ್ ಹೈಕೋರ್ಟ್‌ನಲ್ಲಿ ಮಿಸ್ ಯುನಿವರ್ಸ್ ಆರ್ಗನೈಸೇಶನ್ ಹಾಗೂ ಅದರ ಸಹ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ನಿಯಮದಂತೆಯೇ ಹೆಜ್ಜೆ ಹಾಕುತ್ತಿದ್ದಾಗ, ವೇದಿಕೆಯಲ್ಲಿದ್ದ ತೆರೆದ ಹಾಗೂ ಗುರುತಿಸದ ಐದು ಅಡಿ ಆಳದ ಕಂದಕಕ್ಕೆ ಬಿದ್ದಿರುವುದಾಗಿ ಗೇಬ್ರಿಯೆಲ್ ಆರೋಪಿಸಿದ್ದಾರೆ. ಆ ಜಾಗದಲ್ಲಿ ಕಾಂಕ್ರೀಟ್ ಮತ್ತು ಲೈಟಿಂಗ್ ಉಪಕರಣಗಳಿದ್ದವು. ಜೊತೆಗೆ ಮುಖದ ಮೇಲೆ ಅತಿಯಾದ ಬೆಳಕು ಬೀಳುತ್ತಿದ್ದರಿಂದ ವೇದಿಕೆಯ ಅಂಚು ಸರಿಯಾಗಿ ಕಾಣಿಸಲಿಲ್ಲ. ಈ ಬಗ್ಗೆ ಇತರ ಸ್ಪರ್ಧಿಗಳೂ ದೂರು ನೀಡಿದ್ದರು. ಘಟನೆ ನಡೆದ ನಂತರವಷ್ಟೇ ಆಯೋಜಕರು ವೇದಿಕೆಯ ಅಂಚಿಗೆ ಪ್ರತ್ಯೇಕ ಬೆಳಕಿನ ವ್ಯವಸ್ಥೆ ಮಾಡಿದ್ದರು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಗೇಬ್ರಿಯೆಲ್, ಈ ಭೀಕರ ಅಪಘಾತದಿಂದಾಗಿ ತೀವ್ರ ದೈಹಿಕ ಹಾಗೂ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮೆದುಳಿಗೆ ಸಂಬಂಧಿಸಿದ ನರಮಂಡಲದ ಸಮಸ್ಯೆಗಳಿಂದ ಬಳಲುತ್ತಿದ್ದು, ಇಂದಿಗೂ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಮಿಸ್ ಯುನಿವರ್ಸ್ ಸಂಸ್ಥೆ, ತಮಗೆ ಯಾವುದೇ ಕಾನೂನು ನೋಟಿಸ್ ತಲುಪಿಲ್ಲ ಎಂದಿದೆ. ಅಲ್ಲದೆ, ಸ್ಥಳೀಯ ಆಯೋಜಕರಾದ ಮಿಸ್ ಯುನಿವರ್ಸ್ ಥೈಲ್ಯಾಂಡ್ ಸಂಸ್ಥೆ ಗೇಬ್ರಿಯೆಲ್ ಅವರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ನಿರಾಕರಿಸಿದಾಗ, ಮಾನವೀಯತೆಯ ಆಧಾರದ ಮೇಲೆ ತಾವೇ ಸಂಪೂರ್ಣ ವೆಚ್ಚವನ್ನು ನೀಡಿದ್ದಾಗಿ ಸಂಸ್ಥೆ ಸ್ಪಷ್ಟನೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular