HomeEntertainmentನವೆಂಬರ್ 29ರಂದು ಬಿಡುಗಡೆಗೆ ಸಜ್ಜಾಗಿದೆ 'ಮಿಸ್ ಯು'

ನವೆಂಬರ್ 29ರಂದು ಬಿಡುಗಡೆಗೆ ಸಜ್ಜಾಗಿದೆ ‘ಮಿಸ್ ಯು’

ಎನ್ ರಾಜಶೇಖರ್ ನಿರ್ದೇಶನದ ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ‘ಮಿಸ್ ಯು’ ಚಿತ್ರ ಇದೇ ತಿಂಗಳು ನವೆಂಬರ್ 29ರಂದು ತೆರೆ ಕಾಣಲಿದೆ. ಈ ಕುರಿತು ನಟಿ ಆಶಿಕಾ ರಂಗನಾಥ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಕರುಣಾಕರನ್, ಬಾಲಸರವಣನ್, ಸಾಸ್ತಿಕ  ಬಣ್ಣ ಹಚ್ಚಿದ್ದು, 7 miles ಪರ್ ಸೆಕೆಂಡ್ ಬ್ಯಾನರ್ ನಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಾಣ ಮಾಡಿದ್ದಾರೆ. ಘಿಬ್ರಾನ್ ವೈಭೋದ ಸಂಗೀತ ಸಂಯೋಜನೆ ನೀಡಿದ್ದಾರೆ.

ದಿನೇಶ್ ಪೊನ್ರಾಜ್ ಸಂಕಲನ,  ಆರ್ ಅಶೋಕ್ ಸಂಭಾಷಣೆ, ದಿನೇಶ್ ಕಾಸಿ ಅವರ ಸಾಹಸ ನಿರ್ದೇಶನ, ಹಾಗೂ ದಿನೇಶ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular