HomeKarnatakaSHOCKING : ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ; ಗುಂಡು ತಗುಲಿ 7 ವರ್ಷದ...

SHOCKING : ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ; ಗುಂಡು ತಗುಲಿ 7 ವರ್ಷದ ಬಾಲಕ ಸಾವು..!

ಚಿಕ್ಕಮಗಳೂರು : ಗನ್ ಜತೆ ಆಟವಾಡುವಾಗ ಮಿಸ್ ಫೈರ್ ಆಗಿ ಗುಂಡು ತಗುಲಿ 7 ವರ್ಷದ ಬಾಲಕ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಏಳು ವರ್ಷದ ವಿಷ್ಣು ಎಂದು ಗುರುತಿಸಲಾಗಿದೆ. ಏರ್ ಗನ್ ಇಟ್ಟುಕೊಂಡು ಆಟವಾಡುತ್ತಿದ್ದ ಬಾಲಕ ಟ್ರಿಗರ್ ಒತ್ತಿದ್ದಾನೆ. ಗನ್ ಮಿಸ್ ಫೈರ್ ಆಗಿ ಗುಂಡು ಬಾಲಕನ ದೇಹ ಹೊಕ್ಕಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ.

ಕಾಫಿ ತೋಟದಲ್ಲಿ ಮಂಗ, ಕಾಡು ಪ್ರಾಣಿಗಳನ್ನು ಓಡಿಸಲು ಏರ್ ಗನ್ ತಂದಿಡಲಾಗಿತ್ತು. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular