HomeLatest Newsಯುವಕನಿಗೆ ಅಮಲೇರಿಸಿ ಬಲವಂತವಾಗಿ ಮದುವೆ ಮಾಡಿಸಿದ ಗೆಳೆಯರು : ಮಂಟಪದಲ್ಲಿ ತೂರಾಡಿದ ವರ |WATCH VIDEO

ಯುವಕನಿಗೆ ಅಮಲೇರಿಸಿ ಬಲವಂತವಾಗಿ ಮದುವೆ ಮಾಡಿಸಿದ ಗೆಳೆಯರು : ಮಂಟಪದಲ್ಲಿ ತೂರಾಡಿದ ವರ |WATCH VIDEO

ಬಿಹಾರ : ಒಬ್ಬ ವ್ಯಕ್ತಿಯನ್ನು ಅವನ ಸಮ್ಮತಿಯಿಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಮದುವೆ ಮಾಡುವುದು ವೈಯಕ್ತಿಕ ಸ್ವಾತಂತ್ರ್ಯದ ನೇರ ಉಲ್ಲಂಘನೆಯಾಗಿದೆ. ಆದರೆ ಬಿಹಾರದ ಸಮಸ್ತಿಪುರದಲ್ಲಿ ನಿತೀಶ್ ಕುಮಾರ್ ಎಂಬ ಯುವಕನಿಗೆ ಬಲವಂತವಾಗಿ ಮದುವೆ ಮಾಡಲಾಗಿದ್ದು, ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.

ಗೆಳೆಯರೇ ಈತನಿಗೆ ನಶೆಯ ಪದಾರ್ಥ ಕುಡಿಸಿ ಅಪಹರಿಸಿದ್ದಾರೆ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗಲೇ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಪೂರ್ಣ ಅಮಲಿನಲ್ಲಿದ್ದಾನೆ. ಆದರೆ, ಹುಡುಗಿಯ ಕಡೆಯವರು ಇದು ಒಪ್ಪಿಗೆಯಿಂದ ನಡೆದ ಮದುವೆ ಎಂದು ವಾದಿಸುತ್ತಿದ್ದಾರೆ.

ನಡೆದಿದ್ದೇನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂಚಲನ ಮೂಡಿಸಿರುವ ಘಟನೆ ಸಮಸ್ತಿಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಕರಾಜ್ ಅಲಿ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಯುವಕ ನಿತೀಶ್ ಕುಮಾರ್ ಜೋಡಿ ಪೋಖರ್ ನಿವಾಸಿ. ನಿತೀಶ್ ಕೆಲಸದ ನಿಮಿತ್ತ ಹೊರಗೆ ಹೋದಾಗ, ಆತನ ಗೆಳೆಯರಾದ ಕುಂದನ್ ರಾಜವಂಶಿ ಮತ್ತು ರಾಹುಲ್ ಆತನನ್ನು ನಂಬಿಸಿ ಅಪಹರಿಸಿದ್ದಾರೆ ಎಂದು ಕುಟುಂಬಸ್ಥರು ದೂರುತ್ತಿದ್ದಾರೆ. ತಂಪು ಪಾನೀಯದಲ್ಲಿ (ಸ್ಪ್ರೈಟ್) ನಶೆಯ ಮಾತ್ರೆ ಬೆರೆಸಿ ಕುಡಿಸಿದ್ದರಿಂದ ಆತ ಪ್ರಜ್ಞೆ ಕಳೆದುಕೊಂಡಿದ್ದ ಎಂದು ಹೇಳಲಾಗಿದೆ.

ಮಂಟಪದ ವಿಡಿಯೋದಲ್ಲಿಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ನಿತೀಶ್ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದೇ ಸ್ಥಿತಿಯಲ್ಲಿ ‘ವರಮಾಲೆ’ ಶಾಸ್ತ್ರ ಮಾಡಿಸಲಾಗಿದೆ. ನಿತೀಶ್ ಕೈಯಲ್ಲಿ ಮಾಲೆ ಹಿಡಿಯಲು ಸಾಧ್ಯವಾಗದಿದ್ದಾಗ, ಮತ್ತೊಬ್ಬ ಯುವಕ ಬಲವಂತವಾಗಿ ಆತನ ಕೈ ಹಿಡಿದು ಹುಡುಗಿಯ ಕೊರಳಿಗೆ ಮಾಲೆ ಹಾಕಿಸಿದ್ದಾನೆ. “ನನಗೆ ಪ್ರಜ್ಞೆ ಬಂದಾಗ ನಾನು ಮದುವೆ ಮಂಟಪದಲ್ಲಿದ್ದೆ. ನಾನು ಪ್ರತಿಭಟಿಸಬಾರದು ಎಂಬ ಕಾರಣಕ್ಕೆ ನನಗೆ ಸತತವಾಗಿ ನಶೆಯ ಮಾತ್ರೆಗಳನ್ನು ನೀಡಲಾಗುತ್ತಿತ್ತು” ಎಂದು ನಿತೀಶ್ ಆರೋಪಿಸಿದ್ದಾನೆ.

ಪರ-ವಿರೋಧ ವಾದಗಳು:

* ಹುಡುಗನಕಡೆಯವರು: ನಿತೀಶ್ ತಾತ ಕೃಷ್ಣದೇವ್ ರೈ ಅವರ ಪ್ರಕಾರ, ಮೊದಲು ಈ ಹುಡುಗಿಯ ಜೊತೆ ಮದುವೆ ಮಾತುಕತೆ ನಡೆದಿತ್ತು. ಆದರೆ ಹುಡುಗಿ ಇಷ್ಟವಾಗದ ಕಾರಣ ಸಂಬಂಧವನ್ನು ನಿರಾಕರಿಸಲಾಗಿತ್ತು. ಇದೇ ದ್ವೇಷದಲ್ಲಿ ನಿತೀಶ್ ಗೆಳೆಯರನ್ನು ಬಳಸಿಕೊಂಡು ಸಂಚು ರೂಪಿಸಿ ಈ ಕೃತ್ಯ ಎಸಗಲಾಗಿದೆ.

*ಹುಡುಗಿಯ ಕಡೆಯವರು: ಹುಡುಗಿಯ ಸಹೋದರ ಜಯ್ ಕುಮಾರ್ ಅಪಹರಣದ ಸುದ್ದಿಯನ್ನು ನಿರಾಕರಿಸಿದ್ದಾನೆ. “ಇದು ಉಭಯ ಕುಟುಂಬಗಳ ಸಮ್ಮತಿಯಿಂದ ನಡೆದ ಮದುವೆ. ಹುಡುಗನ ತಾಯಿ ವಿಡಿಯೋ ಕಾಲ್ ಮೂಲಕ ಹುಡುಗಿಯನ್ನು ನೋಡಿದ್ದರು ಮತ್ತು ಕಳೆದ 6 ತಿಂಗಳಿನಿಂದ ಮಾತುಕತೆ ನಡೆಯುತ್ತಿತ್ತು” ಎಂದು ಆತ ಹೇಳುತ್ತಿದ್ದಾನೆ.

ನಿತೀಶ್ ತಾಯಿ ಪಟೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಕ್ರಮ ಕೈಗೊಂಡು ನಿತೀಶ್‌ನನ್ನು ವಶಕ್ಕೆ ಪಡೆದಿದ್ದಾರೆ. ವೈರಲ್ ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದು, ಯುವಕನಿಗೆ ನಿಜವಾಗಿಯೂ ಅಮಲು ಪದಾರ್ಥ ನೀಡಲಾಗಿದೆಯೇ ಮತ್ತು ಈ ಅಪಹರಣದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular