Shocking News: ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಹಸುಗೂಸನ್ನು ಹೊರಗೆಸೆದ ಪ್ರಾಂಶುಪಾಲ

ತೆಲಂಗಾಣದ ಆಘಾತಕಾರಿ ಘಟನೆಯೊಂದರಲ್ಲಿ, ಅಪ್ರಾಪ್ತ ವಿದ್ಯಾರ್ಥಿನಿ ಹಾಸ್ಟೆಲ್ ಆವರಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಪ್ರಾಂಶುಪಾಲರು ಹೆಣ್ಣು ಮಗುವನ್ನು 15 ಕಿಮೀ ದೂರದ ಕಸದ ತೊಟ್ಟಿಯಲ್ಲಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ವಾಯ್ಸ್ ಅಪ್ ಮಾಧ್ಯಮ ವರದಿಯ ಪ್ರಕಾರ, ಈ ಘಟನೆಯು ನಾರಾಯಣಖೇಡ್‌ನ ತೆಲಂಗಾಣ ಅಲ್ಪಸಂಖ್ಯಾತರ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಟಿಎಮ್‌ಆರ್‌ಐಇಎಸ್) ಜೂನಿಯರ್ ಕಾಲೇಜಿನಲ್ಲಿ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಎಂಬಿಟಿ (ಮಜ್ಲಿಸ್ ಬಚಾವೋ ತೆಹ್ರೀಕ್) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಪೊಲೀಸರಿಂದ ದುರಂತ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ವಿದ್ಯಾರ್ಥಿನಿಯು ಅಪ್ರಾಪ್ತ ವಯಸ್ಸಿನವಳಾಗಿದ್ದು, ಪ್ರಸ್ತುತ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಎಂಬಿಟಿ (ಮಜ್ಲಿಸ್ ಬಚಾವೋ ತೆಹ್ರೀಕ್) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಮಾತನಾಡಿ “ಮಾರ್ಚ್ 24 ರಂದು, ಖಾಜಾಪುರ ಗ್ರಾಮದ ನಿವಾಸಿಗಳು ಕಸದ ತೊಟ್ಟಿಯಲ್ಲಿ ಮಗುವನ್ನು ಎಸೆದಿರುವುದನ್ನು ಕಂಡು, ನಂತರ ಅವರು ಘಟನೆಯನ್ನು ಸಿರ್ಗಾಪುರ ಪೊಲೀಸರಿಗೆ ತಿಳಿಸಿದರು. ಪೊಲೀಸ್ ಸಿಬ್ಬಂದಿ ಹೆಣ್ಣು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ಚಿಕಿತ್ಸೆ ನೀಡಿದ ನಂತರ ಶಿಶುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿಗೆ ಹಸ್ತಾಂತರಿಸಲಾಯಿತು” ಎಂದು ಹೇಳಿದರು.

ನಾರಾಯಣಖೇಡ್ ಪೊಲೀಸ್ ಉಪನಿರೀಕ್ಷಕರು ಘಟನೆಯ ಬಗ್ಗೆ ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read