BREAKING NEWS: ಬಸ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್

ಡೆಹ್ರಾಡೂನ್: ಬಸ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ಐಎಸ್ ಬಿಟಿ ಬಸ್ ನಲ್ಲಿ ಬಲಕಿ ಮೊರಾದಾಬಾದ್ ನಿಂದ ಡೆಹ್ರಾಡೂನ್ ಗೆ ಹೊರಟಿದ್ದಳು. ಬಾಲಕಿ ಮೇಲೆ ಐವರು ಕಾಮುಕರು ಗ್ಯಾಂಗ್ ರೇಪ್ ನಡೆಸಿದ್ದಾರೆ. ಆಗಸ್ಟ್ 13ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರನ ಸಂಬಂಧ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಪಂಜಾಬ್ ನಿವಾಸಿಯಾದ ಬಾಲಕಿ ಪಂಜಾಬ್ ನಿಂದ ದೆಹಲಿಗೆ ಆಗಮಿಸಿ ಅಲ್ಲಿಂದ ಮೊರಾದಾಬಾದ್ ಗೆ ತೆರಳಿದ್ದಳು. ಬಳಿಕ ಮೊರಾದಾಬಾದ್ ನಿಂದ ಡೆಹ್ರಾಡೂನ್ ಗೆ ಬಸ್ ಹತ್ತಿದ್ದಳು. ತಡರಾತ್ರಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಕೃತ್ಯದ ಬಳಿಕ ಬಾಲಕಿಯನ್ನು ಬಸ್ ನಿಂದ ಕೆಳಗಿಳಿಸಿ ದುರುಳರು ತೆರಳಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read