HomeIndiaಮೊಬೈಲ್ ಗೇಮ್ ಗೀಳಿಗೆ ಬಿದ್ದ ಬಾಲಕ ನೇಣಿಗೆ ಶರಣು

ಮೊಬೈಲ್ ಗೇಮ್ ಗೀಳಿಗೆ ಬಿದ್ದ ಬಾಲಕ ನೇಣಿಗೆ ಶರಣು

ಮೊಬೈಲ್ ಗೇಮ್ ಗೀಳಿಗೆ ಬಿದ್ದಿದ್ದ 15 ವರ್ಷದ ಬಾಲಕನೊಬ್ಬ ಪೋಷಕರು ಹಾಳಾದ ಮೊಬೈಲ್ ಸರಿ ಮಾಡಿಸಿಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಈತ ಇನ್ನಿಲ್ಲದಂತೆ ಮೊಬೈಲ್ ಗೇಮ್ ಹುಚ್ಚಿಗೆ ಬಿದ್ದಿದ್ದ. ಸದಾಕಾಲ ಅದರಲ್ಲಿಯೇ ಮುಳುಗಿರುತ್ತಿದ್ದ ಬಾಲಕನಿಗೆ ಪೋಷಕರು ಬೈದು ಬುದ್ದಿ ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಮಧ್ಯೆ ಗೇಮ್ ಆಡಲು ಈತ ಬಳಸುತ್ತಿದ್ದ ಮೊಬೈಲ್ ಹಾಳಾಗಿದ್ದು, ಅದನ್ನು ಸರಿ ಮಾಡಿಸಿಕೊಡುವಂತೆ ಪೋಷಕರಿಗೆ ಪೀಡಿಸುತ್ತಿದ್ದ. ಆದರೆ ಮೊಬೈಲ್ ಹಾಳಾಗಿದ್ದೆ ಒಳ್ಳೆಯದು ಎಂದು ಪೋಷಕರು ನಿರ್ಲಕ್ಷ್ಯ ವಹಿಸಿದ್ದರು.

ಇದರಿಂದ ಮನನೊಂದ ಬಾಲಕ ತನ್ನ ಮನೆಯಲ್ಲಿಯೇ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದು, ಇದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular