
ಕೆಲವೊಬ್ಬರು ತಮ್ಮ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ 18 ವಯಸ್ಸಿನೊಳಗೆ ಮದುವೆ ಮಾಡಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಯುವಜನರನ್ನು ರಕ್ಷಿಸುವ ಸಲುವಾಗಿ ಈ ಕಾನೂನನ್ನು ರೂಪಿಸಲಾಗಿದೆ.
ಇನ್ನು ಮುಂದೆ ನಿಗದಿಪಡಿಸಿರುವ 18 ವಯಸ್ಸಿನೊಳಗೆ ಮದುವೆ ಮಾಡಿಸಿದರೆ ಅಂತವರು ಏಳು ವರ್ಷಗಳ ಕಾಲ ಜೈಲು ಪಾಲಾಗಬೇಕಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ರೂಪಿಸಲಾಗಿರುವ ನೂತನ ಕಾನೂನನ್ನು ಬಹುತೇಕರು ಸ್ವಾಗತಿಸಿದ್ದಾರೆ.

