BREAKING: ರೈತ ಸಮುದಾಯಕ್ಕೆ ಗುಡ್ ನ್ಯೂಸ್: ನಾಳೆಯಿಂದಲೇ ಹಾಲಿನ ಖರೀದಿ ದರ 2 ರೂ. ಹೆಚ್ಚಳ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಲಾಗಿದೆ.

ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದು, ಬೇಸಿಗೆ ಹಂಗಾಮಿನಲ್ಲಿ ಹೈನುರಾಸುಗಳ ನಿರ್ವಹಣಾ ವೆಚ್ಚ ಅಧಿಕಾರವಾಗುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ಲಾಭಾಂಶ ಕಡಿಮೆ ಆಗುವುದರಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು ಪ್ರತಿ ಕೆ.ಜಿ.ಗೆ 2 ರೂ. ಹೆಚ್ಚಿಸಿ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರರವರ ಅದ್ಯಕ್ಷತೆಯಲ್ಲಿ ಜ.31 ರಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.

ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಎಫ್‌ಎಟಿ 4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಕೆ.ಜಿ.ಹಾಲಿಗೆ 32.09 ರೂ. ಪರಿಷ್ಕೃತ ದರ 34.18 ರೂ. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಎಫ್‌ಎಟಿ4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಪರಿಷ್ಕೃತ ದರ 32.22 ರೂ. ಪರಿಷ್ಕೃತ ದರ ದಿ: 01/02/2025 ರಿಂದ ದಿ:31/03/2025ರವರೆಗೆ ಜಾರಿಯಲ್ಲಿರುತ್ತದೆ.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ.ಹೆಚ್.ಎನ್. ವಿದ್ಯಾಧರ, ಉಪಾಧ್ಯಕ್ಷ ಚೇತನ್ ಎಸ್ ನಾಡಿಗರ, ನಿರ್ದೇಶಕರಾದ ಆರ್.ಎಂ.ಮಂಜುನಾಥ ಗೌಡ, ಡಿ.ಆನಂದ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಜಿ.ಪಿ.ರೇವಣಸಿದ್ದಪ್ಪ, ಹೆಚ್.ಕೆ.ಬಸಪ್ಪ, ಹೆಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು, ಜಿ.ಬಿ.ಶೇಖರಪ್ಪ, ಇತರರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read