HomeKarnatakaMilk Price Hike : ನಾಳೆಯಿಂದ ಹಾಲಿನ ದರ 3 ರೂ. ಹೆಚ್ಚಳ : ಗ್ರಾಹಕರ...

Milk Price Hike : ನಾಳೆಯಿಂದ ಹಾಲಿನ ದರ 3 ರೂ. ಹೆಚ್ಚಳ : ಗ್ರಾಹಕರ ಜೇಬು ಸುಡಲಿದೆ ಕಾಫಿ, ಟೀ

ಬೆಂಗಳೂರು: ನಾಳೆಯಿಂದ ( ಆಗಸ್ಟ್ 1) ಹಾಲಿನ ದರ 3 ರೂ. ಹೆಚ್ಚಳವಾಗಲಿದ್ದು, ಕಾಫಿ, ಟೀ ಗ್ರಾಹಕರ ಜೇಬು ಸುಡಲಿದೆ. ಹೌದು. ಹಾಲಿನ ದರ ಏರಿಕೆಯಿಂದ ಹೋಟೆಲ್ ಗಳಲ್ಲಿ ಕಾಫಿ, ಟೀ ಬೆಲೆ ಕೂಡ ಹೆಚ್ಚಳವಾಗಲಿದೆ.

ನಂದಿನಿ ಹಾಲಿನ ದರ 3 ರೂ. ಏರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ ಹಾಲಿನ ದರ ಹೆಚ್ಚಳ ಹಿನ್ನೆಲೆ ಕಾಫಿ-ಟೀ ಬೆಲೆಯೂ ಹೆಚ್ಚಳವಾಗಲಿದ್ದು, ಹೋಟೆಲ್ ಕಾಫಿ ಟೀ ದರದಲ್ಲಿ 1% ದರ ಹೆಚ್ಚಿಸಲು ನಿರ್ಧರಿಸಲಾಗಿದೆ.

ಹೋಟೆಲ್ ಊಟ, ತಿಂಡಿ ಬೆಲೆಯೂ ಹೆಚ್ಚಳ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸಿ ಬೇಳೆಬಾತ್ 45 ರಿಂದ 55 ರೂ, ರೈಸ್ ಪೂರಿ 45 ರಿಂದ 50 ರೂ. ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಟಿ ಮತ್ತು ಕಾಫಿ 12 ರಿಂದ 15 ರೂ. ಬಾದಾಮಿ ಹಾಲು 18 ರೂಗೆ ಏರಿಕೆ ಮಾಡಲಾಗುತ್ತದೆ. ಕರ್ಡ್ ರೈಸ್ 45-55 ರೂಗೆ ಏರಿಕೆಯಾಗಲಿದೆ.

ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಮೀಲ್ಸ್ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ. ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ರೈಸ್ ಬಾತ್ 40 ರಿಂದ 45 ರೂ ಗೆ ಹೆಚ್ಚಳ, ಇಡ್ಲಿ (2 ಕ್ಕೆ) 40-50. ಸೆಟ್ ದೋಸೆ 60-65, ಬೆಣ್ಣೆ ಮಸಾಲೆ ದೋಸೆ 70-80 ರೂಗೆ ಏರಿಕೆಯಾಗಲಿದೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು, ಇದಕ್ಕೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರಲಿದೆ.

ಯಾವುದಕ್ಕೆ ಎಷ್ಟು ದರ ( Milk) 

ಯಾವುದಕ್ಕೆ ಎಷ್ಟು ದರ ಎಂಬ ಮಾಹಿತಿಯನ್ನು ನೋಡುವುದಾದರೆ, ಹೋಮೋಜಿನೈಸ್ಟ್ ಟೋನ್ಡ್ ಹಾಲು 40 ರೂ ದಿಂದ 43 ರೂ. ಶುಭಂ ಹಾಲು 45 ರೂ ದಿಂದ 48 ರೂ. ಮೊಸರು- 47- 50 ರೂ. ಟೋನ್ಡ್ ಹಾಲು- 39 ರೂದಿಂದ 42 ರೂ. ಶುಭಂ ಹಾಲು (ಹಸಿರು)- 45 ರೂದಿಂದ 48 ರೂ. ಸ್ಪೆಷಲ್ ಹಾಲು (ಆರೆಂಜ್) 45 ರೂ ದಿಂದ 48 ರೂ. ಸಮೃದ್ದಿ ಹಾಲು 50 ರೂ ದಿಂದ 53 ರೂ. ಸಂತೃಪ್ತಿ ಹಾಲು 52 ರೂ ದಿಂದ 55 ರೂ. ಆಗಿದೆ.

ಕೆಎಂಎಫ್ ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು, ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಿ 5 ರೂಪಾಯಿ ಬದಲಿಗೆ 3 ರೂ. ಹೆಚ್ಚಳಕ್ಕೆ ಸರ್ಕಾರ ಸಮ್ಮತಿ ನೀಡಿದೆ. ಹಾಲು ಒಕ್ಕೂಟದ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ ಎಂದು ಹೇಳಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular