HomeIndia21 ವರ್ಷ ಸೇವೆ ಸಲ್ಲಿಸಿದ ಮೈಕ್ರೋಸಾಫ್ಟ್​ ಉದ್ಯೋಗಿ ವಜಾ: ಭಾವುಕ ಪೋಸ್ಟ್​

21 ವರ್ಷ ಸೇವೆ ಸಲ್ಲಿಸಿದ ಮೈಕ್ರೋಸಾಫ್ಟ್​ ಉದ್ಯೋಗಿ ವಜಾ: ಭಾವುಕ ಪೋಸ್ಟ್​

ಕೋವಿಡ್​ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ ಇಂದಿಗೂ ಮುಂದುವರೆದಿದೆ. ಹಲವಾರು ಕಂಪೆನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದೀಗ ಜಗತ್ತಿನ ನಂಬರ್​ ಒನ್​ ಕಂಪೆನಿ ಮೈಕ್ರೋಸಾಫ್ಟ್​ನಲ್ಲಿ ಇಲ್ಲಿಯವರೆಗೆ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಲವರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಶಾಂತ ಕಮಾನಿ ಎನ್ನುವವರ ಪೋಸ್ಟ್​ ವೈರಲ್ ಆಗುತ್ತಿದೆ. 21 ವರ್ಷಗಳ ಕಾಲ ಮೈಕ್ರೋಸಾಫ್ಟ್​ ಕಂಪೆನಿಯಲ್ಲಿ ಕೆಲಸ ಮಾಡಿರುವ ಇವರನ್ನು ವಜಾಗೊಳಿಸಲಾಗಿದ್ದು, ಅದನ್ನು ಅವರು ಬರೆದುಕೊಂಡಿದ್ದಾರೆ. ಈ ಕಂಪೆನಿ ವೃತ್ತಿ ಸಂಬಂಧದ ಬೆಳವಣಿಗೆಗೆ ಮಾತ್ರವಲ್ಲ, ಸಹೋದ್ಯೋಗಿಗಳೊಂದಿಗೆ ವೈಯಕ್ತಿಕ ಸಂಬಂಧ ಬೆಸೆಯಲೂ ಕಾರಣವಾಗಿದೆ. ಈ ಕಂಪೆನಿಯಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನನ್ನಲ್ಲಿ ಕೃತಜ್ಞತಾ ಭಾವ ಮೂಡಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಲೇಜು ಶಿಕ್ಷಣ ಮುಗಿಸಿ ಸೇರಿದ ಮೊದಲ ಕೆಲಸ ಇದಾಗಿತ್ತು. ಮೊದಲ ಕೆಲಸವೆಂದ ಮೇಲೆ ಆತಂಕ, ಉತ್ಸಾಹ ಎರಡೂ ಇದ್ದದ್ದೇ. ಆದರೆ ಈ ಕಂಪೆನಿಯ ಅನೇಕ ಪ್ರತಿಭಾವಂತ, ಸ್ಮಾರ್ಟ್​ ಜನರೊಂದಿಗಿನ ಒಡನಾಟ ನನ್ನನ್ನು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡಿತು. ಈ ಪ್ರಯಾಣದಲ್ಲಿ ಅನೇಕರೊಂದಿಗೆ ವೈಯಕ್ತಿಕ ಒಡನಾಟ ಬೆಳೆಯಿತು. ಒಳ್ಳೆಯ ಮತ್ತು ಸವಾಲಿನ ಸಂದರ್ಭಗಳು ಬಂದಾಗೆಲ್ಲ ಅವರು ಜೊತೆಯಾದರು. ಒಂದು ದೊಡ್ಡ ಕುಟುಂಬವೇ ನಿರ್ಮಾಣವಾಯಿತು. ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದು, ಅವರಿಗೆ ಹಲವರು ಶುಭ ಹಾರೈಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular