ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ: ಖಲಿಸ್ತಾನ್ ಟೈಗರ್ ಫೋರ್ಸ್ ನ ಅರ್ಶ್ ದಲ್ಲಾ ಭಯೋತ್ಪಾದಕನೆಂದು ಘೋಷಣೆ

ನವದೆಹಲಿ: ಕೆನಡಾ ಮೂಲದ ದರೋಡೆಕೋರ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್(ಕೆಟಿಎಫ್) ಕಾರ್ಯಕರ್ತ ಅರ್ಶ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ನನ್ನು ಕೇಂದ್ರ ಗೃಹ ಸಚಿವಾಲಯ(ಎಂಹೆಚ್‌ಎ) ಸೋಮವಾರ ಗೊತ್ತುಪಡಿಸಿದ ಭಯೋತ್ಪಾದಕ ಎಂದು ಘೋಷಿಸಿದೆ.

ಅರ್ಶ್ ದಲ್ಲಾ ಕೊಲೆ, ಸುಲಿಗೆ ಮತ್ತು ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳ ಜೊತೆಗೆ ಗುರಿಪಡಿಸಿದ ಹತ್ಯೆಗಳ ಆರೋಪವೂ ಆತನ ಮೇಲಿದೆ.

ಅಧಿಸೂಚನೆಯ ಪ್ರಕಾರ, ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಅರ್ಶ್ದೀಪ್ KTF ನೊಂದಿಗೆ ಸಂಬಂಧ ಹೊಂದಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸುತ್ತಿರುವ ಉದ್ದೇಶಿತ ಹತ್ಯೆ, ಭಯೋತ್ಪಾದಕ ನಿಧಿಗಾಗಿ ಹಣ ಸುಲಿಗೆ, ಕೊಲೆ ಯತ್ನ, ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುವ ಯತ್ನ, ಪಂಜಾಬ್‌ನಲ್ಲಿ ಜನರಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಅರ್ಷದೀಪ್ ಆರೋಪಿಯಾಗಿದ್ದಾನೆ ಎಂದು ತಿಳಿಸಲಾಗಿದೆ.

ಅರ್ಶ್ ದೀಪ್ ಯುಎಪಿಎ ಅಡಿಯಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗೆ ಹತ್ತಿರವಾಗಿದ್ದು, ಆತನ ಪರವಾಗಿ ಭಯೋತ್ಪಾದಕ ಘಟಕಗಳನ್ನು ನಡೆಸುತ್ತಿದ್ದಾರೆ. ಅವರು ಭಯೋತ್ಪಾದನಾ ಚಟುವಟಿಕೆಗಳಲ್ಲದೆ ಕೊಲೆ, ಸುಲಿಗೆ ಮತ್ತು ಉದ್ದೇಶಿತ ಹತ್ಯೆಗಳಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು, ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳ ಗಡಿಯಾಚೆ ಕಳ್ಳಸಾಗಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read