HomeLatest NewsBIG NEWS: ಪಾರ್ಟಿ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 12 ಜನರು ಸಾವು 20ಕ್ಕೂ...

BIG NEWS: ಪಾರ್ಟಿ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 12 ಜನರು ಸಾವು 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಇರಾಪುವಾಟೋ ನಗರದಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 12 ಜನರು ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.

ಮೆಕ್ಸಿಕೊ ನಗರದ ವಾಯುವ್ಯದಲ್ಲಿರುವ ಗುವಾನಾಜುವಾಟೋ ರಾಅಜ್ಯದ ಇರಾಪುವಾಟೊ ನಗರದಲ್ಲಿ ಸೇಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್ ಪಾರ್ಟಿ ಆಯೋಜನೆ ಮಾಡಿತ್ತು. ಚರ್ಚ್ ಎದುರಿನ ರಸ್ತೆಯಲ್ಲಿ ನೂರಾರು ಜನರು ನೃತ್ಯ ಮಾಡುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಸೂಟೌಟ್ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಲ್ಲಿ 12 ಜನರು ಸಾಅವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೆಕ್ಸಿಕನ್ ಪೊಲೀಸ್ ಅಧಿಕಾರಿ ಗೋಮೆಜ್ ತಿಳಿಸಿದ್ದಾರೆ.

ಮೆಕ್ಸಿಕೊ ಅಧ್ಯಕ್ಷೆ ಕ್ಲೌಡಿಯಾ ಶೀನ್ ಬಾಮ್ ದಾಳಿಯನ್ನು ಖಂಡಿಸಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತನಿಖೆಗೆ ಆದೇಶ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular