HomeKarnatakaಎಂಜಿ ರೋಡ್​​​-ಬೈಯಪ್ಪನಹಳ್ಳಿ ನಡುವೆ ʻನಮ್ಮ ಮೆಟ್ರೋʼ ರೈಲು ಸಂಚಾರ ಪುನರಾರಂಭ!

ಎಂಜಿ ರೋಡ್​​​-ಬೈಯಪ್ಪನಹಳ್ಳಿ ನಡುವೆ ʻನಮ್ಮ ಮೆಟ್ರೋʼ ರೈಲು ಸಂಚಾರ ಪುನರಾರಂಭ!

ಬೆಂಗಳೂರು : ತಾಂತ್ರಿಕ ದೋಷದಿಂದ ಇಂದು ಬೆಳಗ್ಗೆ ನಮ್ಮ ಮೆಟ್ರೊ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದ್ದು, ಸಂಚಾರ ಪುನರಾರಂಭವಾಗಿದೆ.

ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದಿಂದ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ ಬಿಎಂಆರ್‌ ಸಿಎಲ್ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಸರಿಪಡಿಸಿದ್ದು ಸಂಚಾರ ಪುನರಾರಂಭವಾಗಿದೆ. ‌

ಬಿಎಂಆರ್​ಸಿಎಲ್​ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಎಂಜಿ ರೋಡ್ ಮತ್ತು ಚಲ್ಲಘಟ್ಟ ನಡುವೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್  ನಡುವೆ ಸಂಚಾರ ಪುನರಾರಂಭವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular