ಸಮಯಕ್ಕೆ ಸರಿಯಾಗಿ ಮುಟ್ಟು ಬರುತ್ತಿಲ್ಲವೇ…..? ಇಲ್ಲಿದೆ ಪರಿಣಾಮಕಾರಿ ಮದ್ದು…!

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ತೊಂದರೆ ಸಾಮಾನ್ಯ. ಆದರೆ ಕೆಲವರು ಅನಿಯಮಿತ ಪಿರಿಯಡ್ಸ್‌ನಿಂದ ತೊಂದರೆಗೊಳಗಾಗುತ್ತಾರೆ. ಕೆಲವೊಮ್ಮೆ ಕೇವಲ 15 ರಿಂದ 20 ದಿನಗಳಿಗೆ ಮುಟ್ಟು ಬರುತ್ತದೆ, ಇನ್ನು ಕೆಲವು ಬಾರಿ ಒಂದೂವರೆ ತಿಂಗಳು ಅಥವಾ 2 ತಿಂಗಳಿಗೊಮ್ಮೆ ಮುಟ್ಟು ಬರಬಹುದು. ನಿಯಮಿತ ಋತುಚಕ್ರ ಮಹಿಳೆಯರ ಆರೋಗ್ಯಕ್ಕೆ ಬಹಳ ಮುಖ್ಯ. ಈ ದಿನಗಳಲ್ಲಿ ಸಂಭವಿಸುವ ರಕ್ತಸ್ರಾವವು ವಾಸ್ತವವಾಗಿ ದೇಹದಿಂದ ಸಮಯಕ್ಕೆ ಸರಿಯಾಗಿ ತೆಗೆದುಹಾಕಬೇಕಾದ ಜೀವಾಣುಗಳಿಂದ ಉಂಟಾಗುತ್ತದೆ.

ಅನಿಯಮಿತ ಮುಟ್ಟು, ಪಿಸಿಓಎಸ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಾಗಿದೆ. ಇದು ಹಾರ್ಮೋನುಗಳ ಅಸ್ವಸ್ಥತೆಯಾಗಿದ್ದು, ಇದರಿಂದ ಋತುಚಕ್ರದಲ್ಲಿ ಅಡಚಣೆಗಳು ಸಂಭವಿಸುತ್ತವೆ. ಸಮಯಕ್ಕೆ ಸರಿಯಾಗಿ ಬಾರದ ಪಿರಿಯಡ್ಸ್‌ನಿಂದ ತೊಂದರೆಗೊಳಗಾಗಿದ್ದರೆ ಕೆಲವು ಮನೆಮದ್ದುಗಳನ್ನು ಅನುಸರಿಸಿ.

ಶುಂಠಿ : ನಿಯಮಿತ ಮುಟ್ಟಿಗಾಗಿ ಶುಂಠಿಯನ್ನು ಸೇವಿಸಬಹುದು. ಇದು ಅತ್ಯಂತ ಪರಿಣಾಮಕಾರಿ ಮತ್ತು ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಔಷಧೀಯ ಗುಣಗಳಿಂದಾಗಿ ಶುಂಠಿಯನ್ನು ಮುಟ್ಟಿನ ಸಮಸ್ಯೆಗಳ ಚಿಕಿತ್ಸೆಗೆ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಶುಂಠಿ ಕಷಾಯ ಕುಡಿಯುವುದರಿಂದ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಹಸಿ ಪಪ್ಪಾಯ: ಈಸ್ಟ್ರೊಜೆನ್ ಹಾರ್ಮೋನ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಹಸಿ ಪಪ್ಪಾಯದಲ್ಲಿ ಕ್ಯಾರೋಟಿನ್ ಸಹ ಕಂಡುಬರುತ್ತದೆ. ಇದು ಪಿಸಿಓಎಸ್ ರೋಗಲಕ್ಷಣಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಹಸಿ ಪಪ್ಪಾಯದಿಂದ ಪಲ್ಯ ತಯಾರಿಸಿ ತಿನ್ನಬಹುದು. ಅಥವಾ ಜ್ಯೂಸ್‌ ಕೂಡ ಕುಡಿಯಬಹುದು.

ದಾಳಿಂಬೆ : ಪಿರಿಯಡ್ಸ್ ಸರಿಯಾದ ಸಮಯಕ್ಕೆ ಬರದೇ ಇರುವುದು ದೇಹದಲ್ಲಿನ ರಕ್ತ ಮತ್ತು ವಿಟಮಿನ್ ಸಿ ಕೊರತೆಯ ಪರಿಣಾಮವಾಗಿದೆ. ಹಾಗಾಗಿ ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಪಾರ್ಸ್ಲಿ : ಇದು ಒಂದು ರೀತಿಯ ಸೊಪ್ಪು. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ತಡವಾದ ಅಥವಾ ಅನಿಯಮಿತ ಮುಟ್ಟಿನ  ಸಮಸ್ಯೆಯನ್ನು ಹೋಗಲಾಡಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read