ಮದುವೆ ಮನೆಯಲ್ಲಿ ರಂಗೇರಿಸಿದ ನೃತ್ಯ: ನೆಟ್ಟಿಗರು ಫುಲ್​ ಖುಷ್​

ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲೊಂದು ಅಂಥಾ ವಿಡಿಯೋ ವೈರಲ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಾಟ್​ ನೃತ್ಯ ಪ್ರದರ್ಶನಗಳಿಲ್ಲದೆ ಮದುವೆಗಳು ಅಪೂರ್ಣವಾಗಿವೆ ಮತ್ತು ಇವು ನೆಟ್ಟಿಗರನ್ನು​ ಗೆಲ್ಲುತ್ತಲೇ ಇವೆ. ಅಂಥದ್ದೇ ಒಂದು ವಿಡಿಯೋ ಇದು.

ಮದುವೆ ಮನೆಯಲ್ಲಿ ಇಬ್ಬರು ಪುರುಷರು ತಮ್ಮ ಪ್ರದರ್ಶನದೊಂದಿಗೆ ಡ್ಯಾನ್ಸ್ ಫ್ಲೋರ್‌ಗೆ ಕಿಚ್ಚು ಹಚ್ಚಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅಬ್ದುಲ್ಲಾ ರಫೀಕ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ​ಮಾಡಿಕೊಂಡಿದ್ದಾರೆ.

ಚಿಕ್ಕದಾದರೂ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಅಬ್ದುಲ್ಲಾ ಶಾಜರ್ ಶಫೀಕ್ ಜೊತೆಗೆ ಮ್ಯಾಶಪ್‌ನ ಆಕರ್ಷಕ ಬೀಟ್‌ಗಳಿಗೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರೂ ಸಾಂಪ್ರದಾಯಿಕ ಕಪ್ಪು ಬಟ್ಟೆಗಳಲ್ಲಿ ಜೋಡಿಯಾಗಿ ನರ್ತಿಸಿದರು. ಇದು ಮದುವೆ ಮನೆಯ ಹೈಲೈಟ್​ ಆಗಿತ್ತು. ಮದುಮಕ್ಕಳು ಕೂಡ ಸಂತೋಷದಿಂದ ನರ್ತಿಸಿದರು. ಅಸಲಿಗೆ ಈ ನೃತ್ಯ ಮಾಡುವಂತೆ ವಧುವೇ ಕೋರಿಕೊಂಡಿದ್ದಳು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read