HomeBeautyಸೌಂದರ್ಯದ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ಆಸಕ್ತಿ

ಸೌಂದರ್ಯದ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿತ್ತು.

ಭಾರತೀಯ ಪುರುಷರು ಹಾಗೂ ಮಹಿಳೆಯರು ಸೌಂದರ್ಯವರ್ಧಕ ವಿಚಾರದಲ್ಲಿ ಸಮಾನ ಆಸಕ್ತಿ ಹೊಂದಿದ್ದಾರಂತೆ. ಹಾಗೂ ಪ್ರತಿ ತಿಂಗಳು ಸರಾಸರಿ 9 ಸೌಂದರ್ಯವರ್ಧಕಗಳನ್ನ ಖರೀದಿ ಮಾಡುತ್ತಾರಂತೆ.

ಈಗಿನ ಯುಗದಲ್ಲಿ ಅನೇಕರು ಸೌಂದರ್ಯ ಸಂಬಂಧಿ ಸಲಹೆ ಹಾಗೂ ಸ್ಪೂರ್ತಿ ಪಡೆಯೋದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಾ ಇರುತ್ತಾರೆ. 10ರಲ್ಲಿ ಒಂಬತ್ತು ಮಂದಿ ಸಾಮಾಜಿಕ ಜಾಲತಾಣಗಳಿಂದ ಸ್ಪೂರ್ತಿ ಪಡೆಯುತ್ತಾರೆ ಅಂತಾ ಅಧ್ಯಯನ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

56 ಶೇಕಡಾದಷ್ಟು ಜನರು ಸೌಂದರ್ಯವರ್ಧಕಗಳ ಬಗ್ಗೆ ಮಾಹಿತಿಗಾಗಿ ಯೂಟ್ಯೂಬ್​ನಲ್ಲಿ ಹುಡುಕಾಡುತ್ತಾರೆ. ಆದರೆ ಮೂವತ್ತು ಪ್ರತಿಶತದಷ್ಟು ಮಂದಿ ಗೂಗಲ್​ ಸರ್ಚ್ ಹಾಗೂ ಇ ಕಾಮರ್ಸ್​ ವೆಬ್​ಸೈಟ್​ಗಳಲ್ಲಿ ಹುಡುಕಾಟ ನಡೆಸುತ್ತಾರಂತೆ.

For Latest News Updates, Join Our Whatsapp Community🚩
RELATED ARTICLES

Most Popular