ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಪಹಣಿಯಲ್ಲಿ ಕಂದಾಯ ನಿಗದಿಯಾಗದ ಜಮೀನುಗಳಿಗೆ ಕಂದಾಯ ನಿಗದಿಗೊಳಿಸಲಾಗುವುದು.
ಈ ಸಲುವಾಗಿ ಪ್ರಾಯೋಗಿಕ ಗ್ರಾಮವನ್ನಾಗಿ ಆಯ್ಕೆ ಮಾಡುವ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಮಡಿಕೇರಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಡಿಕೇರಿ ತಾಲ್ಲೂಕಿನ ಮಡಿಕೇರಿ ಹೋಬಳಿಯ ಕೊಡಂಬೂರು ಗ್ರಾಮದ ಕಂದಾಯ ನಿಗದಿಯಾಗದೆ ಇರುವ ಸರ್ವೆ ನಂಬರ್ ಗಳಿಗೆ ಕಂದಾಯ ನಿಗದಿಗೊಳಿಸುವ ಸಲುವಾಗಿ ಪ್ರಾಯೋಗಿಕ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಪ್ರಕ್ರಿಯೆಯು 2025 ರ ಏಪ್ರಿಲ್ 21 ರಿಂದ ಪ್ರಾರಂಭಗೊಂಡು ಜೂನ್ 15 ರವರೆಗೆ ಅಳತೆ ಕಾರ್ಯ ನಿರ್ವಹಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಮಡಿಕೇರಿ ಹೋಬಳಿ ಕಸಬಾ ಕಂದಾಯ ಪರಿವೀಕ್ಷಕರು ತಿಳಿಸಿದ್ದಾರೆ.