‘ವಿಶ್ವ ಕಪ್’ ಗೆದ್ದುಕೊಟ್ಟ ಧೋನಿ ಸಿಕ್ಸರ್; ಬಾಲ್ ಬಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಎಂಸಿಎ ಸಿದ್ಧತೆ

MCA announces auction of two 'MS Dhoni Special' seats at Wankhede Stadium

2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸಿದ ಬಳಿಕ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿತ್ತು.

ಇದೀಗ ಮಹೇಂದ್ರ ಸಿಂಗ್ ಧೋನಿಯವರು ಸಿಕ್ಸರ್ ಬಾರಿಸಿದ ಬಾಲ್ ಬಿದ್ದ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಿದ್ದವಾಗಿದ್ದು, ಈಗಾಗಲೇ ಆ ಜಾಗದಲ್ಲಿದ್ದ 5 ಆಸನಗಳನ್ನು ತೆರವುಗೊಳಿಸಲಾಗಿದೆ.

ಈ ಐದು ಆಸನಗಳನ್ನು ಹರಾಜು ಮಾಡಲಾಗುತ್ತಿದ್ದು, ಇದರಿಂದ ಸಂಗ್ರಹವಾದ ಹಣವನ್ನು ಉದಯೋನ್ಮುಖ ಕ್ರೀಡಾಪಟುಗಳ ವಿದ್ಯಾರ್ಥಿ ವೇತನಕ್ಕೆ ಬಳಸಿಕೊಳ್ಳಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದ್ದು, ಜೊತೆಗೆ ಬಾಲ್ ಬಿದ್ದ ಜಾಗದಲ್ಲಿ ನಿರ್ಮಾಣವಾಗುವ ಪುಟ್ಟ ಸ್ಮಾರಕದ ಉದ್ಘಾಟನೆಯನ್ನು ಖುದ್ದು ಮಹೇಂದ್ರ ಸಿಂಗ್ ಧೋನಿ ಅವರಿಂದಲೇ ಉದ್ಘಾಟನೆ ನೆರವೇರಿಸಲು ಸಿದ್ಧತೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read