HomeLatest Newsಏ. 1 ಮೂರ್ಖರ ದಿನ ಅಲ್ಲ,  ಬುದ್ಧಿಶಾಲಿಗಳ ದಿನವಾಗಲಿ : ನಟ ಉಪೇಂದ್ರ ಹೊಸ ಚಿಂತನೆ...

ಏ. 1 ಮೂರ್ಖರ ದಿನ ಅಲ್ಲ,  ಬುದ್ಧಿಶಾಲಿಗಳ ದಿನವಾಗಲಿ : ನಟ ಉಪೇಂದ್ರ ಹೊಸ ಚಿಂತನೆ !

ಬೆಂಗಳೂರು: ಪ್ರ ತಿವರ್ಷ ಏಪ್ರಿಲ್ 1 ಬಂತೆಂದರೆ ಸಾಕು, ಒಬ್ಬರನ್ನೊಬ್ಬರು ಹೇಗೆ ಮೂರ್ಖರನ್ನಾಗಿ ಮಾಡುವುದು, ಯಾರ ಕಾಲೆಳೆಯುವುದು ಎಂಬ ತಯಾರಿಯಲ್ಲೇ ಅನೇಕರು ಇರುತ್ತಾರೆ. ಆದರೆ, ಸದಾ ವಿಭಿನ್ನವಾಗಿ ಯೋಚಿಸುವ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಈ ಬಾರಿ ಈ ದಿನಕ್ಕೆ ಹೊಸ ಅರ್ಥ ನೀಡಿದ್ದಾರೆ. “ಒಬ್ಬರ ಕಾಲು ಎಳೆದು ಗೇಲಿ ಮಾಡುವ ಬದಲು, ಒಬ್ಬರ ಕೈ ಹಿಡಿದು ಮೇಲೆತ್ತುವ ಬುದ್ಧಿವಂತಿಕೆಯನ್ನು ಇಂದಿನಿಂದಲೇ ಆರಂಭಿಸೋಣ” ಎಂಬ ಅರ್ಥಪೂರ್ಣ ಸಂದೇಶದ ಮೂಲಕ ಅವರು ಏಪ್ರಿಲ್ 1 ಅನ್ನು ‘ಬುದ್ಧಿವಂತರ ದಿನ’ವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಇಂದಿನ ಸಮಾಜದಲ್ಲಿ ಪರಸ್ಪರ ಕಾಲೆಳೆಯುವ ಗುಣಕ್ಕಿಂತ, ಪರಸ್ಪರ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ ಎಂಬ ಅವರ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯೆಸ್,   ಪ್ರತಿ ವರ್ಷ ಏಪ್ರಿಲ್ 1 ಎಂದರೆ ಎಲ್ಲರಿಗೂ ನೆನಪಾಗುವುದು ‘ಮೂರ್ಖರ ದಿನ’ (April Fools’ Day). ಒಬ್ಬರನ್ನೊಬ್ಬರು ಗೇಲಿ ಮಾಡುವುದು, ಸುಳ್ಳು ಹೇಳಿ ನಗುವುದು ಸಾಮಾನ್ಯ. ಆದರೆ, ಸ್ಯಾಂಡಲ್‌ವುಡ್‌ನ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಈ ದಿನದ ಕುರಿತು ಸಮಾಜಕ್ಕೆ ಒಂದು ಅತ್ಯಂತ ಮೌಲ್ಯಯುತ ಸಂದೇಶ ನೀಡಿದ್ದಾರೆ.

ಏಪ್ರಿಲ್ 1 ರಂದು  “ಒಬ್ಬರ ಕಾಲು ಎಳೆದು ಗೇಲಿ ಮಾಡುವ ದಿನವನ್ನಾಗಿ ಆಚರಿಸುವ ಬದಲು, ಒಬ್ಬರ ಕೈ ಹಿಡಿದು ಮೇಲೆತ್ತುವ ‘ಬುದ್ಧಿಶಾಲಿಗಳ ದಿನ’ವನ್ನಾಗಿ ಇದನ್ನು ಬದಲಾಯಿಸೋಣ” ಎಂದು ಉಪೇಂದ್ರ ಕರೆ ನೀಡಿದ್ದಾರೆ. ಈ ದಿನವನ್ನು ಕೇವಲ ತಮಾಷೆಗಾಗಿ ಬಳಸದೆ, ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿಸಬೇಕು ಎಂಬುದು ಅವರ ಆಶಯವಾಗಿದೆ.  : ಸಮಾಜದಲ್ಲಿ ಪರಸ್ಪರ ಕಾಲೆಳೆಯುವ ಗುಣ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಅಂತಹ ನಡವಳಿಕೆಯನ್ನು ಬಿಟ್ಟು ಬುದ್ಧಿವಂತಿಕೆಯಿಂದ ಪರಸ್ಪರ ಬೆಂಬಲವಾಗಿ ನಿಲ್ಲೋಣ ಎಂಬ ಕಳಕಳಿ ಅವರ ಟ್ವೀಟ್‌ನಲ್ಲಿ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ಉಪೇಂದ್ರ ಟ್ವೀಟ್

ಏಪ್ರಿಲ್ 1. ಮೂರ್ಖರ ದಿನ ಒಬ್ಬರ ಕಾಲ್ ಇನ್ನೊಬ್ಬರು ಎಳೆದು ಗೇಲಿ ಮಾಡೋ ದಿನ , ಈ ದಿನಾನ ಒಬ್ಬರ ಕೈ ಇನ್ನೊಬ್ಬರು ಹಿಡಿದು ಮೇಲೆ ಎತ್ತೋ ಬುದ್ಧಿಶಾಲಿ ದಿನ ಮಾಡೋಣ ?

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಉಪೇಂದ್ರ ಅವರ ಈ ಟ್ವೀಟ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ಅವರ ಈ ‘ಬುದ್ಧಿವಂತ’ ಆಲೋಚನೆಯನ್ನು ಶ್ಲಾಘಿಸುತ್ತಿದ್ದಾರೆ. “ಯಾವಾಗಲೂ ವಿಭಿನ್ನವಾಗಿ ಯೋಚಿಸುವ ಉಪ್ಪಿ ಸರ್ ಈ ಬಾರಿ ಸಮಾಜಕ್ಕೆ ಒಂದು ದೊಡ್ಡ ಪಾಠ ಹೇಳಿಕೊಟ್ಟಿದ್ದಾರೆ” ಎಂದು ಕಾಮೆಂಟ್‌ಗಳು ಹರಿದುಬರುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular