HomeUncategorizedBREAKING: ವಿಜಯ್ ಟಿವಿಕೆ 12 ಸೀಟ್ ಗೆದ್ದರೆ ಹೆಚ್ಚು; ಈ ಬಾರಿಯೂ ಡಿಎಂಕೆಯದ್ದೇ ಸರ್ಕಾರ ಎಂದ...

BREAKING: ವಿಜಯ್ ಟಿವಿಕೆ 12 ಸೀಟ್ ಗೆದ್ದರೆ ಹೆಚ್ಚು; ಈ ಬಾರಿಯೂ ಡಿಎಂಕೆಯದ್ದೇ ಸರ್ಕಾರ ಎಂದ ಸಮೀಕ್ಷೆ!

ಇಂದು ( ಏಪ್ರಿಲ್ 29 ) ಪಶ್ಚಿಮ ಬಂಗಾಳ ವಿಧಾನಸಭೆಯ ಎರಡನೇ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ನಾಲ್ಕು ರಾಜ್ಯಗಳು ಪುದುಚೆರಿಯ ಚುನಾವಣಾ ಸಮೀಕ್ಷೆಯನ್ನು ಪ್ರಕಟಿಸಿವೆ.

ಈ ಪೈಕಿ ತಮಿಳುನಾಡಿನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲ ರಾಜ್ಯದ ಮತದಾರರಲ್ಲಿ ಮಾತ್ರವಲ್ಲದೇ ಇತರೆ ಜನರಲ್ಲಿಯೂ ಮೂಡಿತ್ತು. ಕಾರಣ ಈ ಬಾರಿ ಚುನಾವಣೆಗೆ ಸಿನಿಮಾ ನಟ ವಿಜಯ್ ಧುಮುಕಿದ್ದು, ತಮ್ಮ ಟಿವಿಕೆ ಪಕ್ಷವನ್ನು ಎಲ್ಲೆಡೆ ಪೈಪೋಟಿಗೆ ಇಳಿಸಿದ್ದರು.

ಹೀಗೆ ಇದೇ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ ಟಿವಿಕೆ ಡಿಎಂಕೆಗೆ ಫೈಟ್ ನೀಡಲಿದೆ ಎಂದು ಟಿವಿಕೆ ಹಾಗೂ ವಿಜಯ್ ಹಿಂಬಾಲಕರು ಅಭಿಪ್ರಾಯ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಎಲ್ಲ ವಿಶ್ವಾಸಕ್ಕೆ ಚುನಾವಣೋತ್ತರ ಸಮೀಕ್ಷೆಗಳು ತಣ್ಣೀರೆರೆಚಿವೆ. ಅದರಲ್ಲೂ ಮ್ಯಾಟ್ರಿಜ್ ಸಮೀಕ್ಷೆ ಟಿವಿಕೆ ಹೆಚ್ಚೆಂದರೆ 12 ಸೀಟುಗಳನ್ನು ಗೆದ್ದರೆ ಹೆಚ್ಚು ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ ಡಿಎಂಕೆ 122ರಿಂದ 132 ಸೀಟುಗಳನ್ನು ಗೆಲ್ಲಲಿದ್ದು, ಎಎಂಡಿಎಂಕೆ 87ರಿಂದ 100 ಸೀಟುಗಳನ್ನು ಪಡೆಯಲಿದೆ, ಟಿವಿಕೆ 10ರಿಂದ 12 ಸೀಟುಗಳನ್ನು ಪಡೆಯಬಹುದು ಹಾಗೂ ಇತರರು 0ಯಿಂದ 6 ಸೀಟುಗಳನ್ನು ಪಡೆಯಬಹುದು ಎಂದು ಪ್ರಕಟಿಸಿದೆ.

224 ಸೀಟುಗಳಿರುವ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲು 118 ಸೀಟುಗಳನ್ನು ಪಡೆದುಕೊಳ್ಳಬೇಕು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular