ಅವಿವಾಹಿತ ಗರ್ಭಿಣಿಯರಿಗೂ ಸಿಗುತ್ತಾ ಹೆರಿಗೆ ರಜೆ ? ಇಲ್ಲಿದೆ ಉತ್ತರ

ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಹೆರಿಗೆ ರಜೆ ಅಂದ್ರೆ ಗರ್ಭಿಣಿಯರು ಮಾತ್ರ ತೆಗೆದುಕೊಳ್ಳುವ ರಜೆ. ಎಲ್ಲ ಕಂಪನಿಗಳು ಗರ್ಭಿಣಿಯರಿಗೆ ಈ ರಜೆ ಸೌಲಭ್ಯ ನೀಡಬೇಕಾಗುತ್ತದೆ. ವಿವಾಹಿತ ಮಹಿಳೆಯರಂತೆ ಅವಿವಾಹಿತ ಗರ್ಭಿಣಿಯರಿಗೂ ಈ ಸೌಲಭ್ಯ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಾರ್ಮಿಕ ಕಾನೂನಿನ ಅಡಿಯಲ್ಲಿ ಹೆರಿಗೆ ಪ್ರಯೋಜನ ಮಸೂದೆ 2017 ರಲ್ಲಿ ಕೆಲ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ ಮೂರು ತಿಂಗಳಿದ್ದ ಈ ರಜೆಯನ್ನು ಈಗ ಆರು ತಿಂಗಳಿಗೆ ಹೆಚ್ಚಿಸಲಾಗಿದೆ. ಹತ್ತಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಎಲ್ಲ ಕಂಪನಿಗಳು ಈ ಹೆರಿಗೆ ರಜೆಯನ್ನು ನೀಡಬೇಕು. ಹತ್ತಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇದ್ರ ಅಡಿಯಲ್ಲಿ ಬರುವುದಿಲ್ಲ. ಉದ್ಯೋಗಿಗೆ ಈ ಸಮಯದಲ್ಲಿ ಸಂಬಳ ಸಹಿತ ರಜೆ ಸಿಗುತ್ತದೆ.  ಹೆರಿಗೆ ನಂತ್ರ ಮಗುವಿನ ಆರೈಕೆಗಾಗಿ ರಜೆಯನ್ನು ಸರ್ಕಾರ ವಿಸ್ತರಿಸಿದೆ.

ಭಾರತ ಸರ್ಕಾರ, ಹೆರಿಗೆ ರಜೆಯನ್ನು ಗರ್ಭಿಣಿಯರಿಗೆ ನೀಡಬೇಕು ಎಂದಿದೆ. ಇದ್ರಲ್ಲಿ ವಿವಾಹಿತ ಗರ್ಭಿಣಿ, ಅವಿವಾಹಿತ ಗರ್ಭಿಣಿ ಎಂಬ ಪ್ರತ್ಯೇಕತೆ ಇಲ್ಲ. ಎಲ್ಲ ಗರ್ಭಿಣಿಯರಿಗೆ ಸಂಬಳ ಸಹಿತ ರಜೆ ಸಿಗಲಿದೆ. ಅಲ್ಲದೆ ಅವಿವಾಹಿತ ಮಹಿಳೆಯರಿಗೂ ಆರು ತಿಂಗಳು ರಜೆ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read