HomeEntertainmentಇಂದು ಮಾಸ್ಟರ್ ಆನಂದ್ ನಟನೆಯ 'ನಾಕೋಳಿಕ್ಕೆ ರಂಗ' ಟ್ರೈಲರ್ ರಿಲೀಸ್

ಇಂದು ಮಾಸ್ಟರ್ ಆನಂದ್ ನಟನೆಯ ‘ನಾಕೋಳಿಕ್ಕೆ ರಂಗ’ ಟ್ರೈಲರ್ ರಿಲೀಸ್

ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮಾಸ್ಟರ್ ಆನಂದ್ ಅಭಿನಯದ ‘ನಾ ಕೋಳಿಕ್ಕೆ ರಂಗ’ ಎಂಬ ಹಾಸ್ಯ ಭರಿತ ಚಿತ್ರದ ಟ್ರೈಲರ್ ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಗೊರವಾಲೆ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ಟರ್ ಆನಂದ್ ಸೇರಿದಂತೆ ಭವ್ಯ, ರಾಜೇಶ್ವರಿ, ಹೊನ್ನವಳ್ಳಿ ಕೃಷ್ಣ, ರಾಕ್ ಲೈನ್ ಸುಧಾಕರ್ ಬಣ್ಣ ಹಚ್ಚಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಸಂಗೀತ ಸಂಯೋಜನೆ ನೀಡಿದ್ದು, ಎಸ್ ಟಿ ಸೋಮಶೇಖರ್ ನಿರ್ಮಾಣ ಮಾಡಿದ್ದಾರೆ. ಧನಪಾಲ್ ಛಾಯಾಗ್ರಹಣ, ಹಾಗೂ ವಿಶ್ವಾ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular