ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಜಿಮ್ನಿ; ಇಲ್ಲಿದೆ ಬೆಲೆ, ಮೈಲೇಜ್ ಸೇರಿದಂತೆ ಇತರೆ ವಿವರ

1980-90 ರ ದಶಕದಲ್ಲಿ ಬಿಡುಗಡೆಯಾಗಿದ್ದರೂ ಸಹ ಭಾರತದಲ್ಲಿ ಇಂದಿಗೂ ಪ್ರತ್ಯೇಕ ಅಭಿಮಾನಿ ಬಳಗ ಹೊಂದಿರುವ ಜಿಪ್ಸಿಯ ಉತ್ಪಾದನೆ ನಿಂತು ದಶಕಗಳೇ ಕಳೆದಿವೆ. ಇದೀಗ ಇದೇ ಜಿಪ್ಸಿ ನೆನಪಿಸುವ ಮತ್ತೊಂದು ವಾಹನವನ್ನು ಜಿಮ್ನಿ ರೂಪದಲ್ಲಿ ತಂದಿದೆ ಇಂಡೋ-ಜಪಾನೀ ಆಟೋಮೊಬೈಲ್ ದಿಗ್ಗಜ ಮಾರುತಿ-ಸುಜ಼ುಕಿ.

ಜೂನ್ 7ರಂದು ಜಿಮ್ನಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಅಂದೇ ಬೆಲೆಯನ್ನು ಸಹ ತಿಳಿಸುವುದಾಗಿ ಮಾರುತಿ ತಿಳಿಸಿದೆ. ಇದೇ ಜನವರಿಯಲ್ಲಿ ಆಟೋ ಎಕ್ಸ್ಪೋಗಳಲ್ಲಿ ಬಿಡುಗಡೆಯಾದಾಗಿನಿಂದ ಭಾರೀ ಸುದ್ದಿಯಲ್ಲಿರುವ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಲು ವಾಹನ ಪ್ರಿಯರು ಕಾಯುತ್ತಿದ್ದು, ಅದಾಗಲೇ ಬುಕಿಂಗ್ ಗವಾಕ್ಷಿಯನ್ನು ತೆರೆಯಲಾಗಿದೆ.

ಈಗಾಗಲೇ 30,000 ಘಟಕಗಳಿಗೆ ಬುಕಿಂಗ್ ಕಂಡಿರುವ ಜಿಮ್ನಿಯ ಬೆಲೆಯು 10-12 ಲಕ್ಷ ರೂ. (ಎಕ್ಸ್‌-ಶೋರೂಂ) ಇರುವ ಸಾಧ್ಯತೆ ಇದೆ. ಜ಼ೆಟಾ ಹಾಗೂ ಆಲ್ಫಾಗಳೆಂಬ ಎರಡು ಟ್ರಿಮ್‌ಗಳಲ್ಲಿ ಜಿಮ್ನಿ ಬರಲಿದೆ. ಆಲ್ಫಾ ಟ್ರಿಮ್‌ ಟಾಪ್ ಎಂಡ್ ಆಗಿದ್ದು, ಉತ್ಪಾದನೆ ಹಾಗೂ ಡೆಲಿವರಿ ವಿಚಾರದಲ್ಲಿ ಆದ್ಯತೆ ಪಡೆದಿದೆ.

ಎಲ್‌ಇಡಿ ಹೆಡ್‌ಲೈಟ್‌ಗಳು, 9-ಇಂಚಿನ ಟಚ್‌ಸ್ಕ್ರೀನ್‌, ಸ್ಮಾರ್ಟ್‌ಪ್ಲೇ ಪ್ರೋ+ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಪ್ರೀಮಿಯಂ ಅರ್ಕಾಮೀಸ್ ಸೌಂಡ್ ವ್ಯವಸ್ಥೆ,ಕ್ರೂಸ್ ಕಂಟ್ರೋಲ್ ಹಾಗೂ ಇನ್ನಿತರೆ ಆಧುನಿಕ ಸವಲತ್ತುಗಳನ್ನು ಈ ವಾಹನ ಒಳಗೊಂಡಿದೆ.

ಸುರಕ್ಷತೆ ವಿಚಾರಕ್ಕೆ ಬರೋದಾದರೆ, ಆರು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್-ಹೋಲ್ಡ್ ಅಸಿಸ್ಟ್‌ನೊಂದಿಗೆ ಇಎಸ್‌ಪಿ, ಹಿಲ್ ಡಿಸೆಂಟ್ ಕಂಟ್ರೋಲ್ ಹಾಗೂ ರಿಯರ್‌ ವ್ಯೂ ಕ್ಯಾಮೆರಾಗಳನ್ನು ಜಿಮ್ನಿ ಹೊಂದಿದೆ.

1.5ಲೀ ಕೆ15ಬಿ ಪೆಟ್ರೋಲ್ ಇಂಜಿನ್‌ ಮೂಲಕ 105ಎಚ್‌ಪಿಯಷ್ಟು ಗರಿಷ್ಠ ಶಕ್ತಿ ಹಾಗೂ 134.2ಎನ್‌ಎಂನಷ್ಟು ಗರಿಷ್ಠ ಟಾರ್ಕ್‌ಅನ್ನು ಜಿಮ್ನಿ ಉತ್ಪಾದಿಸಬಲ್ಲದಾಗಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 4-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಜಿಮ್ನಿ ಹೊಂದಿದೆ. ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಪ್ರತಿ ಲೀಟರ್‌ಗೆ 16.94ಕಿಮೀ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ 16.39ಕಿಮೀ/ಲೀ ಮೈಲೇಜ್‌ ಅನ್ನು ಜಿಮ್ನಿ ನೀಡಲಿದೆ ಎಂದು ಮಾರುತಿ-ಸುಜ಼ುಕಿ ತಿಳಿಸಿದೆ.

ಲೈಫ್‌ಸ್ಟೈಲ್ ಆಫ್‌ರೋಡರ್‌ ಕ್ಷೇತ್ರದಲ್ಲಿ ಮಹಿಂದ್ರಾದ ಥಾರ್‌ ಹಾಗೂ ಫೋರ್ಸ್‌ನ ಗೂರ್ಖಾಗಳೊಂದಿಗೆ ಜಿಮ್ನಿ ಪೈಪೋಟಿ ಮಾಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read