HomeAutoಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್​ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ 5-ಡೋರ್ ರೆಡಿಯಾಗುತ್ತಿದ್ದು, ಬರುವ ಮೇ ತಿಂಗಳ ಹೊತ್ತಿಗೆ ಭಾರತದ ಗ್ರಾಹಕರಿಗೆ ಸಿಗುವ ನಿರೀಕ್ಷೆ ಇದೆ.

ಮಾರುತಿ ಜಿಮ್ನಿ 5-ಡೋರ್, ಉದ್ದವಾದ ವೀಲ್‌ಬೇಸ್ ಹೊಂದಿರುವ ಎಸ್‌ಯುವಿಯಾಗಿದೆ. ಇದು 3-ಡೋರ್ ಜಿಮ್ನಿಯನ್ನು ಹೋಲುವಂತೆ ಇದೆ. ಆದರೆ ಎರಡು ಹೆಚ್ಚುವರಿ ಬಾಗಿಲುಗಳನ್ನು ನೀಡಲಾಗಿದೆ. ಇಷ್ಟೇ ಅಲ್ಲದೇ, 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್‌ಬೇಸ್ ನೊಂದಿಗೆ ಜಿಮ್ನಿ 5-ಡೋರ್, ವೀಲ್‌ಬೇಸ್ 3-ಡೋರ್ ಜಿಮ್ನಿ ಮಾದರಿಗಿಂತ 340 ಎಂಎಂ ಉದ್ದವಾಗಿ ಮೂಡಿ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರವನ್ನು ಕೂಡ ಇದು ಹೊಂದಿದೆ. ಇದು ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕ್ ಆಫ್-ರೋಡ್ ಟೈರ್‌ಗಳು ಮತ್ತು ಫ್ಲೇರ್ಡ್ ವೀಲ್ ಆರ್ಚ್‌ನಂತಹ ವಿನ್ಯಾಸದ ವೈಶಿಷ್ಟ್ಯಗಳನ್ನು ಪಡೆದಿದೆ.

ಹೊಸ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಎಕ್ಪೋಸ್ಡ್ ಹಿಂಜ್‌ಗಳೊಂದಿಗೆ ಸಿಂಗಲ್ ಸೈಡ್ ತೆರೆಯುವ ಡೋರ್, ಬ್ಲ್ಯಾಕ್ ಕವರಿಂಗ್ ಡೋರ್-ಮೌಂಟೆಡ್ ಸ್ಪೇರ್ ಟೈರ್ ಮತ್ತು 3-ಡೋರ್ ಜಿಮ್ನಿಯಂತೆ ಬಂಪರ್-ಮೌಂಟೆಡ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಜಿಮ್ನಿ 5-ಡೋರ್ ಹಿಂಭಾಗದಲ್ಲಿ ಯಾವುದೇ ಪ್ರಮುಖ ಸ್ಟೈಲಿಂಗ್ ಬದಲಾವಣೆಗಳು ಆಗಿಲ್ಲ. 195/80 ಸೆಕ್ಷನ್ ಟೈರ್‌ಗಳೊಂದಿಗೆ 15-ಇಂಚಿನ ಅಲಾಯ್ ವೀಲ್ಸ್ ಅನ್ನು ಜಿಮ್ನಿ 5-ಡೋರ್ ಅನ್ನು ಇದು ಹೊಂದಿದೆ. ಜಿಮ್ನಿ 5-ಡೋರ್ ಒಳಭಾಗವು 3-ಡೋರ್ ಜಿಮ್ನಿ ಮಾದರಿಯಂತೆ ಇದೆ ಎನ್ನಲಾಗಿದೆ.

maruti suzuki jimny

maruti jimny 5 door engine specs

maruti suzuki jimny vs mahindra thar design

jimny features

For Latest News Updates, Join Our Whatsapp Community🚩
RELATED ARTICLES

Most Popular