ವಿವಾಹಿತ ಪುರುಷರು ಸೇವಿಸಬೇಕು ದಾಳಿಂಬೆ; ಕಾರಣ ಗೊತ್ತಾ ?

ಮದುವೆಯ ನಂತರ ಸೆಕ್ಸ್‌ ಲೈಫ್‌ ಬಗ್ಗೆ ಆತಂಕ, ದಿಗಿಲು ಇರುವುದು ಸಹಜ. ಅದರಲ್ಲೂ ಪುರುಷರಿಗೆ ದೌರ್ಬಲ್ಯ ಕೂಡ ಕಾಡಬಹುದು. ಅಂತಹ ಸಮಸ್ಯೆಗಳಾದಾಗ ಸಾಮಾನ್ಯವಾಗಿ ಎಲ್ಲರೂ ವಯಾಗ್ರದಂತಹ ಮಾತ್ರೆಗಳ ಮೊರೆ ಹೋಗುತ್ತಾರೆ. ಆದ್ರೆ ಇದು ಅತ್ಯಂತ ಅಪಾಯಕಾರಿ. ಹಾಗಾಗಿ ಕೆಲವೊಂದು ಮನೆ ಮದ್ದುಗಳಿಂದ್ಲೇ ವಿವಾಹಿತ ಪುರುಷರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ವಿವಾಹಿತ ಪುರುಷರಿಗೆ ದಾಳಿಂಬೆ ಹಣ್ಣು ಹೇಳಿ ಮಾಡಿಸಿದಂತಿದೆ. ಪ್ರತಿನಿತ್ಯ ಒಂದು ಕಪ್‌ನಷ್ಟು ಬಿಡಿಸಿದ ದಾಳಿಂಬೆ ಹಣ್ಣನ್ನು ಸೇವನೆ ಮಾಡುತ್ತ ಬಂದರೆ ಲೈಂಗಿಕ ಬದುಕಿಗೆ ಸಂಬಂಧಪಟ್ಟ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ. ಅನೇಕರು ಪ್ರತಿದಿನ ದಾಳಿಂಬೆಯನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡಿರ್ತಾರೆ. ಆದ್ರೆ ನೀವು ದಾಳಿಂಬೆಯನ್ನು ಯಾವಾಗ ಮತ್ತು ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯವಾಗಿದೆ.

ರಾತ್ರಿ ಮಲಗುವ ಮೊದಲು ಒಂದು ಬಟ್ಟಲು ದಾಳಿಂಬೆಯನ್ನು ತಿನ್ನಬೇಕು ಎನ್ನುವುದು ತಜ್ಞರ ಸಲಹೆ. ಇದು ಪುರುಷರ ಫಲವತ್ತತೆ ಮತ್ತು ಲೈಂಗಿಕ ಕ್ರಿಯೆಯನ್ನು ಸುಧಾರಿಸುತ್ತದೆ. ದಾಳಿಂಬೆಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಶುಂಠಿ ಕೂಡ ಅತ್ಯಂತ ಪರಿಣಾಮಕಾರಿಯಾಗಿದೆ.

ಶುಂಠಿ ಸೇವನೆಯಿಂದ್ಲೂ ಲೈಂಗಿಕತೆಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಸ್ಟೋಸ್ಟೆರಾನ್ ಹಾರ್ಮೋನ್ ನಿಮ್ಮ ದೇಹದಲ್ಲಿ ಲೈಂಗಿಕತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದು ಸಾಮಾನ್ಯ ಲೈಂಗಿಕ ಜೀವನಕ್ಕೆ ಅಗತ್ಯವಾದ ಹಾರ್ಮೋನ್. ಇದಲ್ಲದೆ ಹಸಿ ಈರುಳ್ಳಿ ಸೇವನೆ ಕೂಡ ಪ್ರಯೋಜನಕಾರಿಯಾಗಿದೆ. ಇದನ್ನೆಲ್ಲ ಸೇವನೆ ಮಾಡಲು ಆರಂಭಿಸಿದರೆ ವಯಾಗ್ರದ ಅವಶ್ಯಕತೆಯೇ ಬರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read