HomeLatest News'ಬ್ಯಾಂಕಿಂಗ್' ನಿಯಮಗಳಲ್ಲಿ ಹಲವು  ಬದಲಾವಣೆ : 'RBI' ನಿಂದ ಹೊಸ ಮಾರ್ಗಸೂಚಿ ಬಿಡುಗಡೆ

‘ಬ್ಯಾಂಕಿಂಗ್’ ನಿಯಮಗಳಲ್ಲಿ ಹಲವು  ಬದಲಾವಣೆ : ‘RBI’ ನಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಬ್ಯಾಂಕಿಂಗ್ ಗ್ರಾಹಕರಿಗೆ ಅನುಕೂಲವಾಗುವಂತೆ ಹಲವು ನಿಯಮಗಳಲ್ಲಿ ಮಾರ್ಪಾಡು ಮಾಡಿದೆ. ಇದಕ್ಕಾಗಿ ಇದುವರೆಗೆ ಇದ್ದ ಬ್ಯಾಂಕಿಂಗ್ ನಿಬಂಧನೆಗಳು ಮತ್ತು ನಿಯಮಗಳನ್ನು ಬದಲಾಯಿಸುತ್ತಿದೆ. ಅದರ ಭಾಗವಾಗಿ, ಇತ್ತೀಚೆಗೆ ಬ್ಯಾಂಕುಗಳಿಗೆ ಆರ್‌ಬಿಐ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಅದೇನೆಂದರೆ.. ಇನ್ನು ಮುಂದೆ ಬ್ಯಾಂಕುಗಳು ಮೋಸದ ವಿಮೆ, ಎನ್‌ಪಿಎಸ್ (NPS) ಮತ್ತು ಇತರ ಹಣಕಾಸು ಉತ್ಪನ್ನಗಳನ್ನು ತಪ್ಪಾಗಿ ಮಾರಾಟ ಮಾಡದಂತೆ (Mis-selling) ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ, ಗ್ರಾಹಕರಿಗೆ ಹಣ ಮರುಪಾವತಿ (Refund) ಮತ್ತು ಪರಿಹಾರವನ್ನು ನೀಡಬೇಕಾಗುತ್ತದೆ. ಅಲ್ಲದೆ ಆರ್‌ಬಿಐ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಆ ವಿವರಗಳು ಇಲ್ಲಿವೆ:

RBI ಹೊಸ ನಿಯಮಗಳು ಇವೇ:

  • ಏಜೆಂಟ್‌ಗಳ ಪ್ರತ್ಯೇಕತೆ: ಉತ್ಪನ್ನಗಳನ್ನು ಮಾರಾಟ ಮಾಡುವ ಏಜೆಂಟ್‌ಗಳನ್ನು ಬ್ಯಾಂಕ್ ಸಿಬ್ಬಂದಿಯಿಂದ ಪ್ರತ್ಯೇಕಿಸಬೇಕು.
  • ನಡವಳಿಕೆಯ ನಿಯಮಾವಳಿ: ಬ್ಯಾಂಕುಗಳು ಮಾರಾಟದ ನಡವಳಿಕೆಯ ನಿಯಮಾವಳಿಯನ್ನು (Code of Conduct) ರೂಪಿಸಿಕೊಳ್ಳಬೇಕು.
  • ದಂಡ ವಿಧಿಸುವಿಕೆ: ನಿಯಮಗಳನ್ನು ಉಲ್ಲಂಘಿಸುವ ಏಜೆಂಟ್‌ಗಳಿಗೆ ಬ್ಯಾಂಕುಗಳು ದಂಡ ವಿಧಿಸಬಹುದು.
  • ಪ್ರತ್ಯೇಕ ಅನುಮತಿ: ವಿವಿಧ ಸೇವೆಗಳು ಮತ್ತು ಉತ್ಪನ್ನಗಳಿಗೆ ಗ್ರಾಹಕರಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು; ಎಲ್ಲವನ್ನೂ ಒಟ್ಟಾಗಿ ಸೇರಿಸಬಾರದು.
  • ಇಂಟರ್‌ಫೇಸ್ ಬದಲಾವಣೆ: ನಿಯಮಗಳನ್ನು ಓದದ ಹೊರತು ಗ್ರಾಹಕರು ಅನುಮೋದನೆ ನೀಡಲು ಸಾಧ್ಯವಾಗದಂತೆ ಬ್ಯಾಂಕಿಂಗ್ ಆ್ಯಪ್/ವೆಬ್‌ಸೈಟ್ ಇಂಟರ್‌ಫೇಸ್‌ನಲ್ಲಿ ಬದಲಾವಣೆ ಮಾಡಬೇಕು.
  • ಥರ್ಡ್ ಪಾರ್ಟಿ ಉತ್ಪನ್ನಗಳು: ಬ್ಯಾಂಕುಗಳು ಥರ್ಡ್ ಪಾರ್ಟಿ ಉತ್ಪನ್ನಗಳನ್ನು ನೇರವಾಗಿ ಪ್ರಮೋಟ್ ಮಾಡಬಾರದು.
  • ಸಂಪರ್ಕ ನಿಯಮ: ಗ್ರಾಹಕರ ಮುನ್ಸೂಚನೆ ಅಥವಾ ಅನುಮತಿಯಿಲ್ಲದೆ ಏಜೆಂಟ್‌ಗಳು ಅಥವಾ ಸಿಬ್ಬಂದಿ ಕರೆ ಮಾಡಬಾರದು ಅಥವಾ ಭೇಟಿಯಾಗಬಾರದು.
  • ಅರ್ಹತೆ ಆಧಾರಿತ ಮಾರಾಟ: ಗ್ರಾಹಕರ ಪ್ರೊಫೈಲ್, ವಯಸ್ಸು, ಆದಾಯ, ಹಣಕಾಸಿನ ಮಾಹಿತಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ಮಾತ್ರ ಉತ್ಪನ್ನಗಳನ್ನು ಮಾರಾಟ ಮಾಡಬೇಕು.
  • ತಪ್ಪು ಮಾಹಿತಿ ನಿಷೇಧ: ತಪ್ಪು ದಾರಿಗೆಳೆಯುವ ಮಾಹಿತಿ ನೀಡುವುದು ಅಥವಾ ಗ್ರಾಹಕರ ಅನುಮತಿಯಿಲ್ಲದೆ ಸೇವೆಗಳನ್ನು ಮಾರಾಟ ಮಾಡುವುದು ಮಾಡಬಾರದು.
  • ಒತ್ತಾಯದ ಮಾರಾಟ ಬೇಡ: ಆಫರ್ ವಿಸ್ತರಿಸಲು ಎರಡನೇ ವಿಮಾ ಪಾಲಿಸಿಯನ್ನು ಖರೀದಿಸುವಂತೆ ಒತ್ತಾಯಿಸಬಾರದು.
  • ಪಾರದರ್ಶಕತೆ: ಗ್ರಾಹಕರನ್ನು ವಂಚಿಸುವ ಯಾವುದೇ ತಾಂತ್ರಿಕ ಅಲ್ಗಾರಿದಮ್‌ಗಳನ್ನು ಬಳಸಬಾರದು.

ತಪ್ಪಾಗಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಏನಾಗುತ್ತದೆ?

ಒಂದು ವೇಳೆ ಗ್ರಾಹಕರಿಗೆ ತಪ್ಪಾಗಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ (Mis-selling), ಆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಅಲ್ಲದೆ ಅಂತಹ ವಹಿವಾಟುಗಳನ್ನು ರದ್ದುಗೊಳಿಸಬೇಕು. ಅದರ ಮೂಲಕ ಉಂಟಾದ ಹಣಕಾಸಿನ ನಷ್ಟಕ್ಕೆ ಸರಿಯಾದ ಪರಿಹಾರವನ್ನು (Compensation) ನೀಡಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ಪನ್ನ ಮಾರಾಟ ಮಾಡಿದ 30 ದಿನಗಳ ನಂತರ ಗ್ರಾಹಕರಿಗೆ ಫೋನ್ ಮಾಡಿ ಅವರ ಅಭಿಪ್ರಾಯವನ್ನು ಕೇಳಬೇಕು. ಬ್ಯಾಂಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಇದರ ಫಲಿತಾಂಶಗಳ ಬಗ್ಗೆ ವರದಿಯನ್ನು ಸಿದ್ಧಪಡಿಸಿಕೊಳ್ಳಬೇಕು.

ಜೂನ್ 1 ರಿಂದ ಜಾರಿ: ಈ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಒಂದು ವೇಳೆ ಬ್ಯಾಂಕುಗಳು ಯಾವುದೇ ತಪ್ಪು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಗ್ರಾಹಕರು ದೂರು ನೀಡಬೇಕು. 30 ದಿನಗಳ ಒಳಗಾಗಿ ದೂರು ನೀಡಬೇಕು ಎಂದು ಆರ್‌ಬಿಐ ಸ್ಪಷ್ಟವಾಗಿ ತಿಳಿಸಿದೆ. ಈ ಹೊಸ ನಿಯಮಗಳಿಂದ ಬ್ಯಾಂಕಿಂಗ್ ಗ್ರಾಹಕರಿಗೆ ಹೆಚ್ಚಿನ ರಕ್ಷಣೆ ಸಿಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular