ಪ್ರೇಯಸಿಗೆ ಸಹಾಯ ಮಾಡಲು ಅತಿವೇಗದ ಚಾಲನೆ; ಪೊಲೀಸರ ಅತಿಥಿಯಾದ ಯುವಕ

ತನ್ನ ಪ್ರೇಯಸಿಗೆ ಸಹಾಯ ಮಾಡಲೆಂದು ತುಂಬಾ ವೇಗವಾಗಿ ವಾಹನ ಚಾಲನೆ ಮಾಡ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.

ಫ್ಲೋರಿಡಾದಲ್ಲಿ ವೇಗದ ಮಿತಿಯನ್ನು ಮೀರಿ ಚಾಲನೆ ಮಾಡಿದ್ದಕ್ಕಾಗಿ 22 ವರ್ಷದ ಜೆವೊನ್ ಪಿಯರೆ ಜಾಕ್ಸನ್ ನನ್ನು ಬಂಧಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಆತ ತನ್ನ ಪ್ರೇಯಸಿಯನ್ನು ಉದ್ಯೋಗ ಸಂದರ್ಶನಕ್ಕೆ ಬಿಡುವ ಸಲುವಾಗಿ ಅತಿ ವೇಗದ ಚಾಲನೆ ಮಾಡ್ತಿದ್ದಾಗಿ ಹೇಳಿದ್ದಾನೆ. ಆತ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ. ಪೊಲೀಸರು ಆತನನ್ನು ಗಮನಿಸಿ ಹಿಡಿಯಲು ಪ್ರಯತ್ನಿಸಿದಾಗಲೂ ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದ.

ಜಾಕ್ಸನ್ ಅವರ ವಾಹನದ ಹಿಂದಿನ ಸೀಟಿನಲ್ಲಿ ಮೂವರು ಚಿಕ್ಕ ಮಕ್ಕಳು ಸಹ ಇದ್ದರು. ಪಾಮ್ ಸ್ಪ್ರಿಂಗ್ಸ್ ಪೊಲೀಸರು ಅವನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ ಅಮಾನತುಗೊಂಡ ಪರವಾನಗಿಯೊಂದಿಗೆ ಚಾಲನೆ ಮಾಡುತ್ತಿದ್ದನ್ನ ಗಮನಿಸಲಾಗಿದೆ.

ಇದು ಮಾತ್ರವಲ್ಲದೆ ಜಾಕ್ಸನ್ ನ ಅತಿ ವೇಗದ ಚಾಲನೆ ಇದೇ ಮೊದಲಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ವರದಿಯ ಪ್ರಕಾರ 22 ವರ್ಷದ ಯುವಕಜಾಕ್ಸನ್ ತನ್ನ ಹೆಸರಿನಲ್ಲಿ ಅನೇಕ ಸಂಚಾರ ಉಲ್ಲಂಘನೆ ದಾಖಲೆಗಳನ್ನು ಹೊಂದಿದ್ದಾನೆ. ಪೊಲೀಸರು ಬಂಧಿಸಿದ ನಂತರ ಅವರನ್ನು ಬ್ರೆವಾರ್ಡ್ ಕೌಂಟಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read