HomeIndiaಅಕ್ರಮ ಸಂಬಂಧ ಶಂಕೆ; ವ್ಯಕ್ತಿಯ ಶಿರಚ್ಛೇದ ಮಾಡಿ ಕತ್ತರಿಸಿದ ತಲೆಯೊಂದಿಗೆ ಪತ್ನಿಯ ತವರಿಗೆ ಬಂದ ಪತಿ...!

ಅಕ್ರಮ ಸಂಬಂಧ ಶಂಕೆ; ವ್ಯಕ್ತಿಯ ಶಿರಚ್ಛೇದ ಮಾಡಿ ಕತ್ತರಿಸಿದ ತಲೆಯೊಂದಿಗೆ ಪತ್ನಿಯ ತವರಿಗೆ ಬಂದ ಪತಿ…!

ಚೆನ್ನೈ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿ ಮಹಾಶಾಯನೊಬ್ಬ ವ್ಯಕ್ತಿಯೋರ್ವನ ಶಿರಚ್ಛೇದ ಮಾಡಿ ಬಳಿಕ ಕತ್ತರಿಸಿದ ತಲೆಯೊಂದಿಗೆ ಪತ್ನಿಯ ತವರಿಗೆ ಬಂದ ಘಟನೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ.

ಎಸ್.ಮೇಲುಸ್ವಾಮಿ ಎಂಬಾತ ಈ ಕೃತ್ಯವೆಸಗಿದ್ದು, ಸಧ್ಯ ಪೊಲೀಸರು ವೇಲುಸ್ವಾಮಿಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೆಡಿಯಾರಪಟ್ಟಿ ಗಿಮ್ಕುಳಂ ಗ್ರಾಮದ ವೇಲುಸ್ವಾಮಿ ತೂತುಕುಡಿ ಜಿಲ್ಲೆಯ ರಾಜಪುತುಕುಡಿಯ ಯುವತಿಯನ್ನು ವಿವಾಹವಾಗಿದ್ದ. ದಂಪತಿಗೆ ಮಕ್ಕಳಿರಲಿಲ್ಲ. ತನ್ನ ಪತ್ನಿಗೆ ಅದೇ ಗ್ರಾಮದ ಮುರುಗನ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ. ಇದೇ ಕಾರಣಕ್ಕೆ ಪತ್ನಿಯೊಂದಿಗೆ ಗ್ರಾಮ ತೊರೆದು ಕಯತಾರ್ ಭಾರತಿ ನಗರದಲ್ಲಿ ವಾಸವಾಗಿದ್ದರು. ಆದರೂ ವೇಲುಸ್ವಾಮಿಗೆ ಪತ್ನಿ ಮೇಲೆ ಅನುಮಾನ ಕಡಿಮೆಯಾಗಿರಲಿಲ್ಲ.

ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವೂ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಪತಿಯಿಂದ ದೂರವಾಗಿ ತವರು ಸೇರಿದ್ದಳು. ಪತ್ನಿ ತನ್ನಿಂದ ದೂರಾಗಿ ತವರು ಸೇರುತ್ತಿದ್ದಂತೆ ಹತಾಶನಾದ ವೇಲುಸ್ವಾಮಿ, ಕಯತಾರ್ ನಿಂದ ಘಿಂಕುಲಂಗೆ ಬಂದಿದ್ದಾನೆ. ಮುರುಗನ್ ಗದ್ದೆಯಲ್ಲಿ ಹಸು ಮೇಯಿಸುತ್ತಿದ್ದ. ಇದೇ ವೇಳೆ ಕೊಡಲಿಹಿಡಿದು ಬಂದ ವೇಲುಸ್ವಾಮಿ, ಮುರುಗನ್ ಶಿರಚ್ಛೇದ ಮಾಡಿದ್ದಾನೆ.

ಕತ್ತರಿಸಿದ ಮುರುಗನ್ ತಲೆ ಹಿಡಿದುಕೊಂಡು ಪತ್ನಿಯ ತವರು ಮನೆಗೆ ತೆರಳಿ, ಅದನ್ನು ಮನೆಯ ಮುಂದೆ ಇರಿಸಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಊತುಮಲೈ ಪೊಲೀಸರು ವೇಲುಸ್ವಾಮಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular