HomeKarnatakaBIG NEWS: ಮಾರಣಾಂತಿಕ ಹಲ್ಲೆಯಿಂದ ಕೋಮಾಗೆ ಜಾರಿದ ಹೋಟೆಲ್ ಮಾಲೀಕ ವಿಜಯೇಂದ್ರ ಶೆಟ್ಟಿ

BIG NEWS: ಮಾರಣಾಂತಿಕ ಹಲ್ಲೆಯಿಂದ ಕೋಮಾಗೆ ಜಾರಿದ ಹೋಟೆಲ್ ಮಾಲೀಕ ವಿಜಯೇಂದ್ರ ಶೆಟ್ಟಿ

ಬೆಂಗಳೂರು: ಮಂಜುನಾಥ್ ಟಿಫಿನ್ ಸೆಂಟರ್ ಹೋಟೆಲ್ ಮಾಲೀಕ ವಿಜಯೇಂದ್ರ ಶೆಟ್ಟಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ವಿಜಯೇಂದ್ರ ಶೆಟ್ಟಿ ಕೋಮಾಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಲಿಕಾನ್ ಟೌನ್ ನಲ್ಲಿ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವಿಜಯೇಂದ್ರ ಶೆಟ್ಟಿ, ಮಂಜುನಾಥ್ ಟಿಫಿನ್ ಸೆಂಟರ್ ಹೋಟೆಲ್ ಮಾಲೀಕರಾಗಿದ್ದಾರೆ.

ರಾತ್ರಿ ಮಲಗುವಾಗ ಕಿಟಕಿ ಬಳಿ ರೂಮ್ ಕೀ ಇಟ್ಟು ವಿಜಯೇಂದ್ರ ಶೆಟ್ಟಿ ಮಲಗುತ್ತಿದ್ದರು. ನಿನ್ನೆ ರಾತ್ರಿ ಕೂಡ ಅದೇ ರೀತಿ ಕಿಟಕಿ ಬಳಿ ಕೀ ಇಟ್ಟು ಮಲಗಿದ್ದರು. ಇದನ್ನು ಗಮನಿಸಿದ್ದ ಪರಿಚಯಸ್ಥರಿಂದಲೇ ಕಿಟಕಿ ಬಳಿ ಇದ್ದ ಕೀ ಮೂಲಕ ರೂಮ್ ಡೋರ್ ತೆಗೆದು ಒಳನುಗ್ಗಿ ವಿಜಯೇಂದ್ರ ಶೆಟ್ಟಿ ಮೇಲೆ ಹಲ್ಲೆ ನಡೆಸಿ ಮತೆ ಬೀಗ ಹಾಕಿ ತೆರಳಿದ್ದಾರೆ. ಬೆಳಿಗ್ಗೆ ಎಷ್ಟು ಹೊತ್ತಾದರು ಏಳದಿದ್ದಾಗ ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದಾಗ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರ ಸ್ಥಿತಿ ತಲುಪಿರುವ ವಿಜಯೇಂದ್ರ ಶೆಟಿ ಕೋಮಾಗೆ ಜಾರಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಟೆಲ್ ಗೆ ಸೀನ್ ಆಫ್ ಕ್ರೈಂ ಟೀಂ ಭೇಟಿ ನೀದಿ ಪರಿಶೀಲನೆ ನಡೆಸಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular